ನೆಲಮಂಗಲದ ಅಂಬೇಡ್ಕರ್ ಭವನದಲ್ಲಿ ನಗರಸಭೆಯಿಂದ ಆಯವ್ಯಯ ಕುರಿತಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಎನ್.ಗಣೇಶ್ ಮಾತನಾಡಿದರು. ನಗರಸಭೆ ವ್ಯವಸ್ಥಾಪಕ ಮುಮ್ತಾಜ್, ಎಇಇ ತಿಮ್ಮೆಗೌಡ, ಕಂದಾಯ ಅಧಿಕಾರಿ ಶಿವಣ್ಣ, ಎಇ ಶ್ರೀನಿವಾಸ್, ಜಗದೀಶ್, ಲೆಕ್ಕ ಅಧೀಕ್ಷಕ ಅನಿಲ್ ಕುಮಾರ್, ಲೆಕ್ಕಪರಿಶೋಧಕ ನಾಗೇಶ್, ಸಮುದಾಯ ಸಂಘಟಕ ನಾರಾಯಣಸ್ವಾಮಿ, ಸಿಬ್ಬಂದಿ ಕನ್ಯಾಕುಮಾರಿ ಇದ್ದರು.
ನೆಲಮಂಗಲ : ಸಂಘ&ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರುವ ಪ್ರಯತ್ನ ನಿರಂತರವಾಗಿ ಮಾಡಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷ ಎನ್.ಗಣೇಶ್ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಗರಸಭೆಯಿಂದ ಆಯೋಜಿಸಿದ್ದ 2026-&27ರ ಆಯವ್ಯಯ ಕುರಿತಾದ ಸಂಘ&ಸಂಸ್ಥೆಗಳ ಹಾಗೂ ಸಾರ್ವಜನಿಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕಳೆದ ಬಾರಿ 20 ಕೋಟಿ ರೂಪಾಯಿ ತೆರಿಗೆ ನಿರೀಕ್ಷಿಸಲಾಗಿದ್ದು, ಶೇ.80 ತೆರಿಗೆ ಸಂಗ್ರಹದ ಗುರಿ ಸಾಧಿಸಲಾಗಿದೆ. ನಗರಕ್ಕೆ ಶಾಶ್ವತವಾದ ನೀರಿನ ಸಂಪನ್ಮೂಲ ಇಲ್ಲದ ಕಾರಣ ಅತಿ ಹೆಚ್ಚು ಹಣವನ್ನು ಕುಡಿಯುವ ನೀರಿನ ಸೌಕರ್ಯ ಒದಗಿಸಲು ವೆಚ್ಚ ಮಾಡಲಾಗುತ್ತಿದೆ. ಶಾಸಕ ಎನ್.ಶ್ರೀನಿವಾಸ್ ನಗರಕ್ಕೆ ಅರ್ಧ ಟಿಎಂಸಿ ಕಾವೇರಿ ತರುತ್ತಿದ್ದು, ನೀರಿನ ಭವಣೆ ನೀಗಲಿದೆ. ಸರ್ಕಾರದಿಂದ ಒಳಚರಂಡಿ ಯೋಜನೆಗೆ ಅನುದಾನ ಮೀಸಲಿರಿಸಿದೆ. ಕಳೆದ ಬಾರಿ ನೀಡಿದ ಸಲಹೆಯಂತೆ ಶೌಚಗೃಹಗಳ ನಿಮಾರ್ಣ, ರಸ್ತೆಗಳ ಅಭಿವೃದ್ಧಿ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿನ ಸಲಹೆಗಳು ಸಭೆಗಳಿಗೆ ಸೀಮಿತವಾಗುತ್ತಿವೆಯೇ ಹೊರತು ಕಾರ್ಯಗತಗೊಳಿಸುತ್ತಿಲ್ಲ. ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿಡುವ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅನಾವಶ್ಯಕವಾಗಿ ಸರ್ಕಾರದ ಹಣ ವೆಚ್ಚ ಮಾಡಲಾಗುತ್ತಿದೆ ಎಂದು ಪರಿಶಿಷ್ಟ ಜಾತಿ, ಪಂಗಡದ ಮುಖಂಡ ನಾರಾಯಣಮೂರ್ತಿ ಆರೋಪಿಸಿದರು.
ಸಲಹೆಗಿಂತ, ಪ್ರತಿಧ್ವನಿಸಿದ ಸಮಸ್ಯೆಗಳು : ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಂಘ&ಸಂಸ್ಥೆಯವರು ಬಂದಿರಲಿಲ್ಲ. ಕೆಆರ್ಎಸ್ ಪಕ್ಷದ ನಾಲ್ಕೆ$ದು ಕಾರ್ಯಕರ್ತರು, ಬೆರಳೆಣಿಕೆ ಸಾರ್ವಜನಿಕರು ಬಿಟ್ಟರೆ ಉಳಿದಂತೆ ನಗರಸಭೆ ಅಧಿಕಾರಿ ಸಿಬ್ಬಂದಿ ಇದ್ದರು. ನಗರಸಭೆ ವ್ಯಾಪ್ತಿಯಲ್ಲಿನ ಪಾರ್ಕ್ ಒತ್ತುವರಿ, ಶೌಚಗೃಹ, ಕುಡಿಯುವ ನೀರಿನ ಸಮಸ್ಯೆಗಳು ಸಭೆಯಲ್ಲಿ ಪ್ರತಿಧ್ವನಿಸಿದವು.
ಸಾರ್ವಜನಿಕರಲ್ಲಿ ಮನವಿ : ಬೇಸಿಗೆಗೂ ಮುನ್ನ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೊಳವೆ ಬಾವಿಗಳು ಬರಿದಾಗುತ್ತಿವೆ. ಈಗಾಗಲೇ ಸುಮಾರು 15 ಕೊಳವೆಬಾವಿ ಕೊರೆದಿದ್ದು, ಪಂಪು ಮೋಟಾರು ಅಳವಡಿಸಿ ಪೈಪ್ಲೈನ್ ಕಾರ್ಯ ಪ್ರಗತಿಯಲ್ಲಿದೆ. ಕೆಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಪೋಲಾಗದಂತೆ ಎಚ್ಚರಿಕೆವಹಿಸಿ ನಗರಸಭೆಯೊಂದಿಗೆ ಸಹಕರಿಸುವಂತೆ ಅಧ್ಯಕ್ಷ ಎನ್.ಗಣೇಶ್ ಮನವಿ ಮಾಡಿದರು.