ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿಯಲ್ಲಿಶುಕ್ರವಾರ ಹೊಸಕೋಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಲು ಸರಬರಾಜು ಮಾಡುವ ಸಕ್ರಿಯ ಸದಸ್ಯರು ಹಾಗೂ ಅವರ ಅವಲಂಬಿತರಿಗೆ ವೈದ್ಯಕಿಯ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು. 2025&26ನೇ ಸಾಲಿನಲ್ಲಿ ಹೈನುಗಾರಿಕೆ ಮಾಡುತ್ತಿರುವ ಕುಟುಂಬದ ಸದಸ್ಯರು ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡಿದ್ದರೆ ಅಂತಹ ಸದಸ್ಯರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ವೈದ್ಯಕಿಯ ಪರಿಹಾರ ಚೆಕ್ಗಳನ್ನು ನೀಡಲಾಗುತ್ತಿದೆ. ನಕ್ಕನಹಳ್ಳಿ, ನಡುವತ್ತಿ, ಬೆಟ್ಟಹಳ್ಳಿ, ಬಿಸನಹಳ್ಳಿ, ಕಮ್ಮಸಂದ್ರ, ಎಂ.ಸತ್ಯವಾರ ಗ್ರಾಮಗಳಲ್ಲಿ ಆನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದ 8 ಮಂದಿಗೆ ಚಿಕಿತ್ಸೆಗೆ ಅನುಗುಣವಾಗಿ 15, 20, 25 ಸಾವಿರ ರೂ.ನಂತೆ ಒಟ್ಟು 8 ಮಂದಿಗೆ 2 ಲಕ್ಷ ರೂ.ಗಳಷ್ಟು ಹಾಗೂ ಮರಣ ಹೊಂದಿದ ಸದಸ್ಯರ ನಾಮಿನಿಗೆ ಪರಿಹಾರಧನದ ಚೆಕ್ ನೀಡಿದೆ. ಹೈನುಗಾರರ ಹಿತ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಿ ಅವರ ಕಷ್ಟ ಸುಖಗಳಿಗೆ ನೆರವಾಗುವ ಪ್ರಾಮಾಣಿಕ ಪ್ರಯತ್ನವನ್ನು ಬಮುಲ್ ವತಿಯಿಂದ ಮಾಡುತ್ತಿದ್ದೇನೆ ಎಂದರು.