ಪ್ರಧಾನಿ ಮೋದಿ ಮಾದರಿ ದೇಶದ ಕನಸುಗಾರ

ಮಸ್ಕಿ ರಥ ಬೀದಿಯಲ್ಲಿರುವ ಮಲ್ಲಿಕಾರ್ಜುನ ದೇವರಿಗೆ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಪ್ರಮುಖರಾದ ಡಾ.ಬಿ.ಎಚ್.ದಿವಟರ್, ಪಂಪಣ್ಣ ಗುಂಡಳ್ಳಿ, ದೊಡ್ಡಪ್ಪ ಬುಳ್ಳಾ, ಸುಗಣ್ಣ ಬಾಳೆಕಾಯಿ, ಜಿ.ವೆಂಕಟೇಶ, ಮಹಾಂತೇಶ ಪಾಟೀಲ ಗುಡದೂರು, ಯಮನಪ್ಪ ಬೋವಿ, ಭರತ ಶೇಠ್ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಬಣ್ಣನೆ
ಮಸ್ಕಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 12 ವರ್ಷ ಸುದೀರ್ಘ ಆಡಳಿತ ನಡೆಸಿ ದಾಖಲೆ ನಿರ್ಮಿಸಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ರಥ ಬೀದಿಯಲ್ಲಿರುವ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ವಿಶ್ವದಲ್ಲಿ ಅಗ್ರಗಣ್ಯ ನಾಯಕರಾಗಿ ಗುರುತಿಸಿಕೊಂಡಿರುವ ಮೋದಿ ಅವರು ಭಾರತವನ್ನು ಮಾದರಿ ದೇಶ ಮಾಡುವ ಕನಸು  ಹೊಂದಿದ್ದಾರೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ ಮಾತನಾಡಿ, ಪ್ರಧಾನಿ ಮೋದಿ 4,399 ದಿನಗಳಲ್ಲಿ ಹಗಲಿರುಳು ಜನ ಸೇವೆಗಾಗಿ ತಮ್ಮ ಜೀವನವನ್ನೆ ಮುಡಾಪಿಗಿಟ್ಟು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net