ಛತ್ತೀಸ್‌ಗಢಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು; ಸಿಎಂ ವಿಷ್ಣುದೇವ ಸಾಯಿ ಸ್ವಾಗತ

ಬಸ್ತರ್ ದಸರಾ, ಮುರಿಯಾ ದರ್ಬಾರ್‌ನಲ್ಲಿ ಭಾಗಿ
Chhattisgarh Chief Minister Vishnu Deo Sai warmly welcomed President Droupadi Murmu upon her arrival at Swami Vivekananda Airport in Raipur. Governor Ramen Deka was also present.
ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ ಸಾಯಿ ಆತ್ಮೀಯವಾಗಿ ಸ್ವಾಗತಿಸಿದರು. ರಾಜ್ಯಪಾಲ ರಮೇನ್ ಡೇಕಾ ಉಪಸ್ಥಿತರಿದ್ದರು.
Published on: 

ರಾಯಪುರ : ಛತ್ತೀಸ್‌ಗಢ ರಾಜ್ಯದ ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಗುರುವಾರ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ರಮೇನ್ ಡೇಕಾ ಮತ್ತು ಮುಖ್ಯಮಂತ್ರಿ ವಿಷ್ಣುದೇವ ಸಾಯಿ ಆತ್ಮೀಯವಾಗಿ ಸ್ವಾಗತಿಸಿದರು.

ಛತ್ತೀಸ್‌ಗಢದ ಜನರ ಪರವಾಗಿ ರಾಷ್ಟ್ರಪತಿ ಅವರನ್ನು ಸ್ವಾಗತಿಸಿದ ಮುಖ್ಯಮಂತ್ರಿ ವಿಷ್ಣುದೇವ ಸಾಯಿ, ಶ್ರೀರಾಮನ ತಾಯಿಯ ತವರು ನೆಲ ಹಾಗೂ ಮಾತಾ ಕೌಶಲ್ಯೆಯ ನಾಡಾದ ಪವಿತ್ರ ಛತ್ತೀಸ್‌ಗಢಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಐತಿಹಾಸಿಕ ಬಸ್ತರ್ ದಸರಾ ಆಚರಣೆ ಹಾಗೂ ಮುರಿಯಾ ದರ್ಬಾರ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸುತ್ತಿದ್ದು, ಛತ್ತೀಸ್‌ಗಢ ರಾಜ್ಯಕ್ಕೆ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಅವರ ಉಪಸ್ಥಿತಿಯು ರಾಜ್ಯದ ಶ್ರೀಮಂತ ಬುಡಕಟ್ಟು ಸಂಸ್ಕೃತಿ ಮತ್ತು ವೈಭವದ ಪರಂಪರೆಯ ಗೌರವವನ್ನು ಹೆಚ್ಚಿಸಲಿದೆ. ಜತೆಗೆ, ವಿಕಸಿತ ಛತ್ತೀಸ್‌ಗಢ ನಿರ್ಮಾಣದ ಸಂಕಲ್ಪಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದು ಮುಖ್ಯಮಂತ್ರಿ ವಿಷ್ಣುದೇವ ಸಾಯಿ ಬಣ್ಣಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net