ಜಾನಪದ ಪರಂಪರೆ ಉಳಿಸಿ ಬೆಳೆಸಿ

ಲೋಕಾಪುರ ಪಟ್ಟಣದ ಬಿವಿವಿ ಸಂಘದ ಮಹಿಳಾ ಪದವಿ ಪೂರ್ವ ಕಾಲೇಜು ಕನ್ನಡ ಸಂಘದ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಜಾನಪದ ದಿನಾಚರಣೆಯನ್ನು ಡಾ. ನಾಗರಾಜ ನಾಡಗೌಡ್ರ ಉದ್ಘಾಟಿಸಿದರು. ಬಿ.ಬಿ. ಮೆಳ್ಳಿಗೇರಿ, ಶಿವಾನಂದ ಹುದ್ದಾರ, ಶಿವನಗೌಡ ಪಾಟೀಲ, ಎಂ.ಎಲ್. ನಾಯ್ಕ ಇನ್ನಿತರರಿದ್ದಾರೆ.
ಲೋಕಾಪುರ ಪಟ್ಟಣದ ಬಿವಿವಿ ಸಂಘದ ಮಹಿಳಾ ಪದವಿ ಪೂರ್ವ ಕಾಲೇಜು ಕನ್ನಡ ಸಂಘದ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಜಾನಪದ ದಿನಾಚರಣೆಯನ್ನು ಡಾ. ನಾಗರಾಜ ನಾಡಗೌಡ್ರ ಉದ್ಘಾಟಿಸಿದರು. ಬಿ.ಬಿ. ಮೆಳ್ಳಿಗೇರಿ, ಶಿವಾನಂದ ಹುದ್ದಾರ, ಶಿವನಗೌಡ ಪಾಟೀಲ, ಎಂ.ಎಲ್. ನಾಯ್ಕ ಇನ್ನಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ನಾಗರಾಜ ನಾಡಗೌಡ್ರ ಅಭಿಮತ
  • ಕನ್ನಡ ಸಂಘ ಉದ್ಘಾಟನೆ

ಲೋಕಾಪುರ: ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆ ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಡಾ. ನಾಗರಾಜ ನಾಡಗೌಡ್ರ ಹೇಳಿದರು.

ಪಟ್ಟಣದ ಬಿವಿವಿ ಸಂಘದ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕನ್ನಡ ಸಂಘದ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಕೇವಲ ಒಂದು ಭಾಷೆಯಲ್ಲ. ಅದು ನಮ್ಮ ನಾಡಿನ ಸಂಸ್ಕೃತಿ. ಪರಂಪರೆ, ಭಾವನೆ ಮತ್ತು ಅಸ್ಮಿತೆಯ ಪ್ರತೀಕ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಓದುವ ಜೊತೆಗೆ ಕನ್ನಡದ ಜನಪದ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು. ಯುವ ಜನತೆ ಕನ್ನಡ ಭಾಷೆ ಬಳಕೆಯನ್ನು ಹೆಚ್ಚಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ನಿವೃತ್ತ ಸಾರಿಗೆ ಇಲಾಖೆ ನೌಕರ ಹಾಗೂ ಜನಪದ ಕಲಾವಿದ ಬಿ.ಬಿ. ಮೆಳ್ಳಿಗೇರಿ ಮಾತನಾಡಿ, ಜಾನಪದ ಸಾಹಿತ್ಯವು ಜನ ಸಾಮಾನ್ಯರ ಬದುಕಿನ ಅನುಭವ, ನಂಬಿಕೆ, ಸಂಪ್ರದಾಯ ಮತ್ತು ಜೀವನ ಮೌಲ್ಯಗಳ ಪ್ರತಿಬಿಂಬವಾಗಿದೆ. ಜಾನಪದ ಕಲೆ ಮತ್ತು ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿದ್ಯಾಥಿಗಳು ಜಾನಪದ ಕಲೆಗಳನ್ನು ಕಲಿತು, ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಶಿವಾನಂದ ಹುದ್ದಾರ ಮಾತನಾಡಿ, ಕನ್ನಡ ಸಂಘವು ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ, ಸಾಹಿತ್ಯಾಶಕ್ತಿ ಹಾಗೂ ಸಜನಶೀಲತೆಯನ್ನು ಬೆಳೆಸುವ ವೇದಿಕೆಯಾಗಬೇಕು. ಶಿಕ್ಷಣ ಜೊತೆಗೆ ನಮ್ಮ ನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಅರಿವು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಅಗತ್ಯ, ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡಲಾಗುವುದು ಎಂದರು.
ಕಾಲೇಜು ಒಕ್ಕೂಟದ ಉಪಾಧ್ಯಕ್ಷ ಎಂ.ಎಲ್. ನಾಯ್ಕ ಮಾತನಾಡಿ, ಕನ್ನಡ ಸಂಘದ ಚಟುವಟಿಕೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತರುವಲ್ಲಿ ಸಹಕಾರಿಯಾಗಲಿ ಎಂದು ತಿಳಿಸಿದರು.
ಕನ್ನಡ ನಾಡಿನ ಜಾನಪದ ಪರಂಪರೆ, ಸಾಹಿತ್ಯ ಕಲೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಹಾಡುಗಳು, ನೃತ್ಯ, ಸಂಗೀತ ಹಾಗೂ ಡೊಳ್ಳುಗಳ ಸದ್ದು ಮೆರಗು ತಂದವು.
ದಿವ್ಯ ಸಾನಿಧ್ಯವನ್ನು ಹಿರೇಮಠದ ಡಾ. ಚಂದ್ರಶೇಖರ ಸ್ವಾಮೀಜಿ ವಹಿಸಿದ್ದರು. ವೈ.ಐ. ಜಂಬಗಿ, ಆರ್.ಎಚ್. ತೋಳಮಟ್ಟಿ, ಬಿ.ಜಿ.ಎಚ್.ಎಸ್.ನ ಮುಖ್ಯೋಪಾಧ್ಯಾಯರಾದ ಶಿವನಗೌಡ ಪಾಟೀಲ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆ ವೈ.ಐ. ಜಂಬಗಿ ಉಪಸ್ಥಿತರಿದ್ದರು. ಯಶೋದಾ ಕಂಬಲಿ ಹಾಗೂ ಸೃಷ್ಟಿ ರಾಠೋಡ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net