ಸಂಸ್ಕೃತಿ, ಆಚರಣೆ ಉಳಿಸಿ-ಬೆಳೆಸಿಕೊಂಡು ಸಾಗಿ

ಚಿಂಚೋಳಿ ತಾಲೂಕಿನ ಗೌಡನಹಳ್ಳಿಯಲ್ಲಿ ಶ್ರೀ ಬೀರಪ್ಪಜ್ಜನ ಜಾತ್ರೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೂಜ್ಯರನ್ನು ವಿಶೇಷವಾಗಿ ಗೌರವಿಸಲಾಯಿತು. ಶ್ರೀ ಅಮೋಸಿದ್ಧ ಗುರುಗಳು, ಶ್ರೀ ದೇವಪ್ಪ ಪೂಜಾರಿ, ಶ್ರೀ ನರಸಪ್ಪ ಪೂಜಾರಿ, ಚಂದ್ರಪ್ಪ ಗೋಬೆನೋರ ಇತರರಿದ್ದರು.
ಚಿಂಚೋಳಿ ತಾಲೂಕಿನ ಗೌಡನಹಳ್ಳಿಯಲ್ಲಿ ಶ್ರೀ ಬೀರಪ್ಪಜ್ಜನ ಜಾತ್ರೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪೂಜ್ಯರನ್ನು ವಿಶೇಷವಾಗಿ ಗೌರವಿಸಲಾಯಿತು. ಶ್ರೀ ಅಮೋಸಿದ್ಧ ಗುರುಗಳು, ಶ್ರೀ ದೇವಪ್ಪ ಪೂಜಾರಿ, ಶ್ರೀ ನರಸಪ್ಪ ಪೂಜಾರಿ, ಚಂದ್ರಪ್ಪ ಗೋಬೆನೋರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮಾಳಪ್ಪ ಮುತ್ಯಾ ಕರೆ
  • ಗೌಡನಹಳ್ಳಿಯಲ್ಲಿ ಬೀರಜ್ಜಪ್ಪನ ಜಾತ್ರೋತ್ಸವ
ಚಿಂಚೋಳಿ: ಹಾಲುಮತಸ್ಥ ಗೊಂಡ ಕುರುಬ ಜನಾಂಗ ಭಾರತದ ಮೂಲ ಜನಾಂಗಗಳಲ್ಲಿ ಒಂದಾಗಿದ್ದು, ತನ್ನದೇ ಆದ ಪ್ರಾಚಿನ ಹಾಗೂ ಧಾರ್ಮಿಕ, ಸಾಂಸತಿಕ ಪರಂಪರೆಗಳನ್ನು ಹೊಂದಿದೆ ಎಂದು ಶ್ರೀ ಮಾಳಪ್ಪ ಮುತ್ಯಾ ಬಿಬ್ಬಳ್ಳಿ ಹೇಳಿದರು.
ಗೌಡನಹಳ್ಳಿಯಲ್ಲಿ ಭಾನುವಾರ ನಡೆದ ಶ್ರೀ ಬೀರಪ್ಪಜ್ಜನ ಜಾತ್ರೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಧಾರ್ಮಿಕವಾಗಿ ಕುರುಬರು ಶೈವ ಪರಂಪರೆಯವರೂ, ಸಾಮಾಜಿಕವಾಗಿ ವೀರಪರಂಪರೆಯವರೂ ಆಗಿದ್ದಾರೆ. ಕುಲದೈವ ಬೀರಪ್ಪ ದೇವರ ದೊಡ್ಡ ಹಬ್ಬ ಧರ್ಮ, ಪದ್ಧತಿಯಂತೆ ಆಚರಿಸುತ್ತಿದ್ದು ನೋಡಿದ್ರೆ ಇವತ್ತಿಗೂ ನಿಸರ್ಗದ ಆರಾಧಕರು ಅನ್ನೊದು ಗೊತ್ತಾಗುತ್ತದೆ. ನಮ್ಮ ಸಂಸತಿ, ಆಚರಣೆಗಳನ್ನು ಉಳಿಸಿ&ಬೆಳೆಸಿಕೊಂಡು ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ಹಯ್ಯಾಳದ ಶ್ರೀ ಮರೆಪ್ಪ ಮುತ್ಯಾ ಸಾನ್ನಿಧ್ಯ ವಹಿಸಿದ್ದರು. ಗದ್ದುಗೆಗೆ ಸ್ಥಳ ನೀಡಿದ ರೇವಣಸಿದ್ದ ಗೋಬೆನೋರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಮರತೂರಿನ ಶ್ರೀ ಅಮೋಸಿದ್ಧ ಗುರುಗಳು, ಕುಡಗುಂಟಿಯ ಶ್ರೀ ದೇವಪ್ಪ ಪೂಜಾರಿ, ಆದಿವಾಸಿ ಅಲೆಮಾರಿ ಬುಡಕಟ್ಟು ಜನಾಂಗದ ಒಕ್ಕೂಟದ ಅಧ್ಯ ಗೋಪಾಲ ಎಂ.ಪಿ., ಪ್ರಮುಖರಾದ ನರಸಪ್ಪ ಪೂಜಾರಿ, ಚಂದ್ರಪ್ಪ ಗೋಬೆನೋರ, ಪ್ರಭು ಬುಡನೋರ ಹಿರಿಕುರುಬ, ಮಾಳಪ್ಪ ಮುನಿ, ತಿಪ್ಪಣ್ಣ ಮುನಿ, ಮಲ್ಲಪ್ಪ, ಧುಳಪ್ಪ ಮುನಿ, ಮಲ್ಲಪ್ಪ ಗೋಬೆನೋರ, ಸಿದ್ದಲಿಂಗ ಹೊಸಳ್ಳಿ, ಪ್ರತಾಪ ಪೂಜಾರಿ, ಸೂರಪ್ಪ ಕಳಗೊಂಡ, ಮಲ್ಲಿಕಾರ್ಜುನ ಮಾಸ್ಟರ್​, ರವೀಂದ್ರ ಹೊಸಳ್ಳಿ, ನಾಗಮ್ಮ ಕಳಗೊಂಡ, ತುಕ್ಕಮ್ಮ ಗೋಬೆನೋರ, ತಿಪ್ಪಮ್ಮ ಮುನಿ, ಮಹಾದೇವಿ ಬುಡನೋರ ಇದ್ದರು.
ಗೌಡನಹಳ್ಳಿಯ ಭೋಗಾವತಿ ನದಿಯಲ್ಲಿ ಗಂಗಾಸ್ನಾನ ಪೂಜೆ ನೆರವೇರಿಸಿ, ಬಳಿಕ ಬೀರಪ್ಪಜ್ಜನಿಗೆ ವಿಶೇಷ ಅಭಿಷೇಕ, ಪೂಜೆ ನಡೆಸಲಾಯಿತು. ಡೊಳ್ಳು ವಾದ್ಯಗಳೊಂದಿಗೆ ಬೀರಪ್ಪಜ್ಜನ ಅದ್ದೂರಿ ಪಲ್ಲಕ್ಕಿ ಉತ್ಸವ ಜರುಗಿತು. ಭಕ್ತರಿಗೆ ಹುಗ್ಗಿ, ಹಾಲು ಮಹಾ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net