ಮೂಲ ಶಿಕ್ಷಣ ಬೋಧನೆಯಿಂದ ಜನಪದ ಸಂಸ್ಕೃತಿ ಉಳಿವು

ಚೇರಂಬಾಣೆ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಗಿಡಕ್ಕೆ ನೀರು ಹಾಕುವ ಮೂಲಕ  ಮುಕ್ಕಾಟಿ ಗಂಗಮ್ಮ ಮಾದಪ್ಪ ಉದ್ಘಾಟಿಸಿದರು. ತುಳಸಿ ಮೋಹನ್, ಹೊಸೊಕ್ಲು ಲತಾ ಮೊಣ್ಣಪ್ಪ, ಅಣ್ಣೆಚ್ಚಿರ ಭೋಜಮ್ಮ ಕುಶಾಲಪ್ಪ, ಕೂರನ ಸುಶೀಲಾ ಅಪ್ಪಾಜಿ, ಬೈಮನ ಜ್ಯೋತಿ ತಿಮ್ಮಯ್ಯ ಇತರರಿದ್ದರು.
ಚೇರಂಬಾಣೆ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಮುಕ್ಕಾಟಿ ಗಂಗಮ್ಮ ಮಾದಪ್ಪ ಉದ್ಘಾಟಿಸಿದರು. ತುಳಸಿ ಮೋಹನ್, ಹೊಸೊಕ್ಲು ಲತಾ ಮೊಣ್ಣಪ್ಪ, ಅಣ್ಣೆಚ್ಚಿರ ಭೋಜಮ್ಮ ಕುಶಾಲಪ್ಪ, ಕೂರನ ಸುಶೀಲಾ ಅಪ್ಪಾಜಿ, ಬೈಮನ ಜ್ಯೋತಿ ತಿಮ್ಮಯ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಶಿಕ್ಷಕಿ ಮುಕ್ಕಾಟಿ ಗಂಗಮ್ಮ ಮಾದಪ್ಪ
  • ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ
ನಾಪೋಕ್ಲು: ವಿದ್ಯೆ ಎಂಬುದು ಪುಸ್ತಕದ ಹುಳು ಅಲ್ಲ. ಅದು ಮಸ್ತಕದ ಜ್ಞಾನ ಎಂದು ನಿವೃತ್ತ ಶಿಕ್ಷಕಿ ಮುಕ್ಕಾಟಿ ಗಂಗಮ್ಮ ಮಾದಪ್ಪ ಹೇಳಿದರು.
ಚೇರಂಬಾಣೆ ಗೌಡ ಮಹಿಳಾ ಒಕ್ಕೂಟ ವತಿಯಿಂದ ಸಮೀಪದ ಚೇರಂಬಾಣೆ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಹಿಂದೆ ರಾಜರ ಕಾಲದಲ್ಲಿ ಗುರುಕುಲದಲ್ಲಿ ವಿದ್ಯೆ ಕಲಿಯುತ್ತಿದ್ದರು. ನಮ್ಮ ಹಿರಿಯರು ಮರದಡಿಯಲ್ಲಿ ವಿದ್ಯೆ ಕಲಿತರು. ಈಗ ನಾವು ಮನೆಯಿಂದ ಶಾಲೆಗೆ ಹೋಗಿ ವಿದ್ಯೆ ಕಲಿತಿದ್ದು, ನಮ್ಮ ಮಕ್ಕಳು ಗುರುಕುಲದಂತೆಯೇ ವಸತಿ ನಿಲಯದಲ್ಲಿ ವಿದ್ಯೆ ಕಲಿಯುವಂತಾಗಿದೆ ಎಂದರು.
ಗಾಂಧೀಜಿ ಹೇಳಿದಂತೆ ನಮ್ಮ ಮಕ್ಕಳಿಗೆ ಮೂಲ ಶಿಕ್ಷಣದ ಮೂಲಕ ಬೋಧನೆ ಮಾಡಿದಲ್ಲಿ ನಮ್ಮ ಜನಪದ ಸಂಸ್ಕೃತಿ ಉಳಿಯುತ್ತದೆ. ಇನ್ನೊಂದು ರೀತಿಯಲ್ಲಿ ಸರ್ಕಾರವೇ ಪಂಚವಾರ್ಷಿಕ ಯೋಜನೆಯಲ್ಲೂ ಶಿಕ್ಷಣವನ್ನು ಒಂದು ಭಾಗವಾಗಿಟ್ಟು ಮಂತ್ರಿಮಂಡಲದಲ್ಲೂ ಒಂದು ಸಮಿತಿಯನ್ನು ರಚನೆ ಮಾಡಿರುವುದು ಸಾಕ್ಷರತೆಯ ಒಂದು ಭಾಗವೇ ಸರಿ. 1966 ರಲ್ಲಿ ಸಾಕ್ಷರತಾ ದಿನ ಜಾರಿಗೆ ಬಂದಿದ್ದು 1967 ರಿಂದ ಸೆ.8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ ಎಂದು ಆಚರಿಸಲಾಗುತ್ತಿದೆ. ನಮ್ಮದು ಪ್ರಜಾಪ್ರಭುತ್ವ ದೇಶ. ಆದಕಾರಣ ಎಳೆಯ ಮಕ್ಕಳಿಗೆ ಧರ್ಮದ ಬಗ್ಗೆ ಬೋಧನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ತುಳಸಿ ಮೋಹನ್, ಸಾಕ್ಷರತೆ ಎಂದರೆ ಓದುವ, ಬರೆಯುವ ಮತ್ತು ದೈನಂದಿನ ಬದುಕಿನಲ್ಲಿ ಅಗತ್ಯವಿರುವ ಮೂಲ ಲೆಕ್ಕಾಚಾರ ಅಥವಾ ಜ್ಞಾನವನ್ನು ಪಡೆದುಕೊಳ್ಳುವುದಾಗಿದೆ. ಸ್ವಾಭಿಮಾನದಿಂದ ಬದುಕಲು ಮತ್ತು ಸಮಾಜದಲ್ಲಿ ಸಮಾನತೆ ಸಾಧಿಸಲು ಇದು ದಾರಿ ಮಾಡಿಕೊಡುತ್ತದೆ. ವೈಯಕ್ತಿಕ ಬೆಳವಣಿಗೆಗೆ ಜ್ಞಾನವನ್ನು ವೃದ್ಧಿಸಿಕೊಳ್ಳಲು, ಹೊಸ ಕೌಶಲಗಳನ್ನು ಕಲಿಯಲು ಮತ್ತು ಸ್ವಾವಲಂಬನೆಯಿಂದ ಗುರಿಗಳನ್ನು ಸಾಧಿಸಲು ಸಾಕ್ಷರತೆ ಸಹಕಾರಿ ಎಂದರು.
ಒಕ್ಕೂಟದ ಉಪಾಧ್ಯಕ್ಷೆ ಹೊಸೊಕ್ಲು ಲತಾ ಮೊಣ್ಣಪ್ಪ, ನಿವೃತ್ತ ಶಿಕ್ಷಕಿ ಅಣ್ಣೆಚ್ಚಿರ ಭೋಜಮ್ಮ ಕುಶಾಲಪ್ಪ, ಉಪಾಧ್ಯಕ್ಷ ಕೂರನ ಸುಶೀಲಾ ಅಪ್ಪಾಜಿ, ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ, ಕಡ್ಯದ ಸ್ಮಿತಾ ಜೀವನ್, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಕಾಳೇರಮ್ಮನ ರಶಿ ಅಶೋಕ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net