ಸರ್ಕಾರಿ ಶಾಲೆಗಳ ಉನ್ನತೀಕರಣ, ಸರೋಜಿನಿ ಮಹಿಷಿ ವರದಿ ಅನುಷ್ಠಾನ, ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಶೇ.25 ಉದ್ಯೋಗ ಮೀಸಲಾತಿ, ಗಡಿ ಜಿಲ್ಲೆಗಳಲ್ಲಿ ಕನ್ನಡದ ಪ್ರಭಾವ ಕುಗ್ಗದಂತೆ ವಿಶೇಷ ಯೋಜನೆಗಳ ಜಾರಿ, ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡದ ಸಂಪೂರ್ಣ ಡಿಜಿಟಲೀಕರಣ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನ್ನಡ ಪಬ್ಲಿಕ್ ಶಾಲೆಗಳ ಸ್ಥಾಪನೆ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಶುಲ್ಕ ವಿನಾಯಿತಿ, ಖಾಸಗಿ, ಸರ್ಕಾರಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಸಂಸ್ಥೆಗಳಿಗೆ ತೆರಿಗೆ ವಿನಾಯಿತಿ ಸೇರಿ 35 ಅಂಶಗಳು ಒಳಗೊಂಡ ಮನವಿ ಪತ್ರವನ್ನು ಸಿಎಂ ಕಚೇರಿಗೆ,ಕನ್ನಡಪುರ ಸಂಘಟನೆಗಳು ಸಲ್ಲಿಸಿವೆ.