10 ವರ್ಷಗಳ ಯೋಜನೆಗೆ ತಯಾರಿ 10-year plan

10 ವರ್ಷಗಳ ಯೋಜನೆಗೆ ತಯಾರಿ 10-year plan
10 ವರ್ಷಗಳ ಯೋಜನೆಗೆ ತಯಾರಿ 10-year plan
Published on
ಶ್ರೀನಿವಾಸಪುರ: ಮುಂದಿನ 10 ವರ್ಷಗಳ ತಯಾರಿಗಾಗಿ ಯೋಜನೆ ಹಾಕಿಕೊಳ್ಳುವ ಜನಗಣತಿ ಯೋಜನೆಯ ತಿಳಿವಳಿಕೆ ಅರಿವನ್ನು ಸಂಪನ್ಮೂಲ ವ್ಯಕ್ತಿಗಳಿಂದ ಪಡೆದು ಕಾಯೋರ್ನ್ಮುಖರಾಗಬೇಕು ಎಂದು ಶಿಕ್ಷಕರಿಗೆ ತಹಸೀಲ್ದಾರ್​ ಜಿ.ಎನ್​.ಸುಧೀಂದ್ರ ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಏ.15ರಿಂದ ಪ್ರತಿ ಮನೆಗೂ ಕಡ್ಡಾಯವಾಗಿ ಭೇಟಿ ನೀಡಿ ಜನಗಣತಿ ಮಾಹಿತಿ ನಮೂದು ಮಾಡಿ ಮುಗಿಸಬೇಕೆಂದು ತಿಳಿಸಿದರು.
ತಾಲೂಕಿನಲ್ಲಿ ಬಾಲಕಿಯರ ಕಾಲೇಜು ಮತ್ತು ಬೈರವೇಶ್ವರ ಶಾಲೆ ಸೇರಿ ಮೊದಲನೇ ಹಂತದ ಜನಗಣತಿ ತರಬೇತಿ ಇದಾಗಿದ್ದು, 700 ಜನಸಂಖ್ಯೆಗೆ ಒಂದು ಬ್ಲಾಕ್​, ಒಬ್ಬ ಗಣತಿದಾರರು ಹಾಗೆಯೇ 391 ಗಣತಿದಾರರು ನೇಮಕವಾಗಿದ್ದು, ಇವರ ಮೇಲೆ 6 ಮಂದಿ ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಂತೆ 57 ಮಂದಿ ಮೇಲ್ವಿಚಾರಕರು ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ವೇಣುಗೋಪಾಲ್​, ವೆಂಕಟಾಚಲಪತಿ, ಪೆದ್ದಪ್ಪಯ್ಯ, ನಟರಾಜ್​, ಮಂಜುನಾಥ್​, ನಿವೃತ್ತ ಶಿಕ್ಷಕ ತಿಪ್ಪಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net