

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಶ್ರೀಲಪ್ರಭುಪಾದರ ಇಸ್ಕಾನ್ ಬೆಂಗಳೂರುಕಳೆದ ನಾಲ್ಕು ದಶಕಗಳಿಂದ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಸಂಭ್ರಮಮತ್ತು ಸಡಗರದಿಂದ ಆಚರಿಸುತ್ತಾಬಂದಿದ್ದು, ಈಬಾರಿ ಶ್ರೀಕೃಷ್ಣನ 5253ನೇಜನ್ಮ ದಿನವನ್ನು ಅದ್ದೂರಿಯಾಗಿಆಚರಿಸಲು ಸಿದ್ಧತೆ ನಡೆಸಿದೆ.
ಇಸ್ಕಾನ್ಬೆಂಗಳೂರು ಸೆ.3ರಿಂದ 5ರವರೆಗೆತನ್ನ ಎಲ್ಲಾ ದೇವಾಲಯಗಳಲ್ಲಿಶ್ರೀಕೃಷ್ಣ ಜನ್ಮಾಷ್ಟಮಿಯನ್ನುಆಚರಿಸಲಿದೆ.ಭಕ್ತರು ವೈದಿಕಸಂಪ್ರದಾಯದ ಪ್ರಕಾರ ದೇವರಿಗೆವಿವಿಧ ಸೇವೆಗಳನ್ನು ಸಲ್ಲಿಸಲುಅವಕಾಶವಿದೆ.ಅಭಿಷೇಕ,ಆರತಿ,ಚಪ್ಪನ್ ಭೋಗ್(56 ಬಗೆಯಪ್ರಸಾದ), ಮಖಾನ್ಮಿಶ್ರಿ ಸೇವೆ (ಬೆಣ್ಣೆ-ಸಕ್ಕರೆಅರ್ಪಣೆ), ಪುಷ್ಪಾಂಜಲಿಸೇವೆ, ಪಲ್ಲಕ್ಕಿಉತ್ಸವ ಮತ್ತು ಜುಲನ್ ಸೇವೆ (ಜೋಕಾಲಿಸೇವೆ) ಸೇರಿವೆ.ಇದಲ್ಲದೆ ಗೋಪೂಜೆ, ಕೋಟಿಜಪ ಯಜ್ಞ, ಗೀತಾಪಾರಾಯಣ, ಜನಪ್ರಿಯಕಲಾವಿದರಿಂದ ನೃತ್ಯ-ಸಂಗೀತಕಾರ್ಯಕ್ರಮಗಳು,ಮತ್ತು ಮಕ್ಕಳಿಂದಶ್ಲೋಕ ಪಠಣ ಹಮ್ಮಿಕೊಳ್ಳಲಾಗಿದೆ.ಪೋಷಕರು ತಮ್ಮಪುಟ್ಟ ಮಕ್ಕಳನ್ನು ರಾಧಾ-ಕೃಷ್ಣರಂತೆಸಿಂಗರಿಸಿ ಭಾಗವಹಿಸಬಹುದಾದಕೃಷ್ಣ ವೇಷಭೂಷಣ ಸ್ಪರ್ಧೆಯನ್ನುಆನ್‌ಲೈನ್‌ನಲ್ಲಿ ಆಯೋಜಿಸಲಾಗಿದೆ.
ಸ್ವಾಗತಂಕೃಷ್ಣ ಎಂಬ ಡಿಜಿಟಲ್ ಕಾರ್ಯಕ್ರಮವನ್ನುಸೆ.4ರಂದುರಾತ್ರಿ 8ರಿಂದನೇರಪ್ರಸಾರ ಮಾಡಲಾಗುವುದು.ಈ ಆಧ್ಯಾತ್ಮಿಕಕಾರ್ಯಕ್ರಮದಲ್ಲಿ ಭಕ್ತಿ ಗೀತೆಗಳಪ್ರದರ್ಶನ,ಜ್ಞಾನವರ್ಧಕಭಾಷಣಗಳು, ವಿಶೇಷಅಭಿಷೇಕ ಮತ್ತು ಆರತಿ ಇರಲಿವೆ.ಆನ್‌ಲೈನ್ವೀಕ್ಷಕರು ನೇರ ರಸಪ್ರಶ್ನೆಸ್ಪರ್ಧೆಯಲ್ಲಿ ಭಾಗವಹಿಸಿ ಆಕರ್ಷಕಬಹುಮಾನಗಳನ್ನು ಗೆಲ್ಲಬಹುದು.
ರಾಜಾಜಿನಗರದಹರೇಕೃಷ್ಣ ಬೆಟ್ಟ,ವಸಂತಪುರದ ವೈಕುಂಠಬೆಟ್ಟ, ವೈಟ್‌ಫೀಲ್ಡ್‌ನಹರೇಕೃಷ್ಣ ಫೀಲ್ಡ್ ಮತ್ತು ಸರ್ಜಾಪುರರಸ್ತೆಯ ಶಾಖೆಗಳಲ್ಲಿ ಕಾರ್ಯಕ್ರಮಗಳುನಡೆಯಲಿವೆ.