ಹಾವು ಕಡಿತದಿಂದ ಗರ್ಭಿಣಿ ಸಾವು

,
,
Published on
ಕಮಲಾಪುರ: ಮಲಗಿರುವಾಗಲೇ ಹಾವು ಕಚ್ಚಿದ್ದರಿಂದ ಗರ್ಭಿಣಿಯೊಬ್ಬಳು ಮೃತಪಟ್ಟ ಟನೆ ತಾಲೂಕಿನ ಓಕಳಿ ಗ್ರಾಮದಲ್ಲಿ ಶುಕ್ರವಾರ ನಸುಕಿನ ಜಾವ ನಡೆದಿದೆ. ಲ್ಮ ವೀರೇಶ ಪುರಾಣಿಕ (22) ಮೃತ ಗರ್ಭಿಣಿ. ಮೃತ ಲಕ್ಷಿ$್ಮ, ಪತಿ ವೀರೇಶ ಹಾಗೂ ಕುಟುಂಬದವರು ಹೊಲದಲ್ಲೇ ಮನೆ ಮಾಡಿಕೊಂಡು ನೆಲೆಸಿದ್ದರು. ಮಲಗಿದ್ದಾಗ ನಸುಕಿನ ಜಾವ ಲಕ್ಷಿ$್ಮಯ ಹಿಮ್ಮಡಿಗೆ ಹಾವು ಕಡಿದಿದೆ. ಕೂಡಲೇ ಕಲಬುರಗಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಮೃತಳ ತಾಯಿ ನಾಗಮ್ಮ ಅವರು ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಈ ಕುರಿತು ತನಿಖೆ ನಡೆಸುವಂತೆ ತಹಸೀಲ್ದಾರ್​ಗೆ ಪತ್ರ ಬರೆದಿದ್ದಾರೆ. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net