ಗರ್ಭಿಣಿ ಕಾನ್‌ಸ್ಟೆಬಲ್ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೇ

constable attacked
constable attacked
Published on

ಪ್ರಮುಖ ಮುಖ್ಯಾಂಶಗಳು

  • ಒಡಿಶಾ ಮೂಲದ ಆರೋಪಿ ಬಂಧನ
  • ಮೊಬೈಲ್ ಕಳ್ಳತನವಾಗಿರುವದೂರು ನೀಡಲು ಬಂದಾಗ ಕೃತ್ಯ

ಬೆಂಗಳೂರು:

ಮೊಬೈಲ್ ಕಳ್ಳತನವಾಗಿರುವ ಬಗ್ಗೆ ದೂರು ನೀಡಲು ಬಂದ ವ್ಯಕ್ತಿಯೋರ್ವ ಕರ್ತವ್ಯ ನಿರತ ಗರ್ಭಿಣಿ ಪೊಲೀಸ್ ಕಾನ್‌ಸ್ಟೆಬಲ್ ಮೆಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಮೆಜೆಸ್ಟಿಕ್ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಒಡಿಶಾ ಮೂಲದ ಗಜೇಂದ್ರ ಬಂಧಿತ. ಆ.26ರಂದು ಮುಂಜಾನೆ 5ಗಂಟೆ ಸುಮಾರಿಗೆ ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಶಿಲ್ಪಾ ಎಂಬುವರಿಗೆ ಕಬ್ಬಿಣದ ರಾಡ್‌ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಕರ್ತವ್ಯ ನಿರ್ವಹಿಸುತ್ತಿದ್ದರು. ಆ.25ರಂದು ರಾತ್ರಿ ಪಾಳಿ ಕರ್ತವ್ಯ ಮುಗಿಸಿ ಆ. 26ರ ಬೆಳಗ್ಗೆ 5ರ ಸುಮಾರಿಗೆ ಆರೋಪಿ ಗಜೇಂದ್ರ ಠಾಣೆಗೆ ಬಂದು ರೈಲ್ವೆ ಫ್ಲಾಟ್ ಫಾರಂ ಸಂಖ್ಯೆ 5ರಲ್ಲಿ ಚಾರ್ಜಿಂಗ್ ಹಾಕಲಾಗಿದ್ದ ಮೊಬೈಲ್ ಕಳ್ಳತನವಾಗಿರುವ ಬಗ್ಗೆ ದೂರ ನೀಡಬೇಕು ಎಂದಿದ್ದಾನೆ. ಆಗ ಕಾನ್‌ಸ್ಟೆಬಲ್ ಶಿಲ್ಪಾ, ಠಾಣಾ ಮೇಲ್ವಿಚಾರಕರು ವಿಶ್ರಾಂತಿಯಲಿದ್ದು, 10 ನಿಮಿಷ ಕಾಯಿರಿ ಕರೆಯುತ್ತೇನೆ ಎಂದಿದ್ದಾರೆ.
ಅದಕ್ಕೆ ಕೋಪಗೊಂಡ ಆರೋಪಿ ದೂರು ತೆಗೆದುಕೊಳ್ಳದಿದ್ದರೆ ಕೊಲೆ ಮಾಡುತ್ತೇನೆ. ನೀವು ಡ್ಯೂಟಿ ಮಾಡುತ್ತಿಲ್ಲ ಎಂದು ಹಿಂದಿ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾನೆ. ನಂತರ ಬ್ಯಾರಿಕೇಡ್ ವ್ಹೀಲ್ ಇರುವ ಕಬ್ಬಿಣ್ಣದ ರಾಡ್‌ನಿಂದ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಶೆಯಲ್ಲಿ ಕೃತ್ಯ
ಆರೋಪಿಯ ವಿಚಾರಣೆ ವೇಳೆ ಗಜೇಂದ್ರ ಮದ್ಯದ ಅಮಲಿನಲ್ಲಿದ್ದರು ಎಂಬುದು ಗೊತ್ತಾಗಿದೆ. ಆರೋಪಿ ಚೆನ್ನೈನಲ್ಲಿ ಗಾರೆ ಕೆಲಸ ಮಾಡುತ್ತಿದ್ದ. ಚಾರ್ಜಿಂಗ್ ಹಾಕಿದಾಗ ಯಾರೋ ಮೊಬೈಲ್ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಆ.26ರ ಬೆಳಗ್ಗೆ ಠಾಣೆಗೆ ಬಂದಾಗ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ರೈಲ್ವೇ ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net