ಕದ್ರಿ ದರ್ಶನದ ಬಳಿಕ ಪಂಪ್‌ವೆಲ್ ವೃತ್ತಕ್ಕೆ ಆಗಮಿಸಿದ ನಾಯಕರು, ಸಂಪುಟ ಸಭೆ ನಡೆಯುವ ಪಡಿಲಿನ ಪ್ರಜಾ ಸೌಧಕ್ಕೆ ತೆರಳಲು ವಿಶೇಷವಾಗಿ ಅಲಂಕರಿಸಲಾಗಿದ್ದ ತೆರೆದ ಅಂಬಾರಿ ಬಸ್ ಏರಿದರು. ಸುಡುಬಿಸಿಲಿನ ನಡುವೆಯೂ ರಸ್ತೆಯುದ್ದಕ್ಕೂ ನೆರೆದಿದ್ದ ನೂರಾರು ಜನರಿಗೆ ನಾಯಕರು ಕೈಬೀಸಿದರು. ಮೆರವಣಿಗೆಯಲ್ಲಿ ಚೆಂಡೆ ವಾದನ, ಹುಲಿವೇಷ, ಗೊಂಬೆ, ಕೊರಗರ ಕೊಳಲು ವಾದನ ಹಾಗೂ ನಾಸಿಕ್ ಬ್ಯಾಂಡ್‌ಗಳು ಕರಾವಳಿಯ ಸಾಂಸ್ಕೃತಿಕ ಮೆರುಗು ತುಂಬಿದವು.