ದೇವರ ಎತ್ತುಗಳಿಗೆ ಪ್ರಸಾದ ಕೊಟ್ಟ ಶಾಸಕ!

ದಿಬ್ಬದಹಳ್ಳಿ ಗ್ರಾಮದ ದೇವರ ಎತ್ತುಗಳಿಗೆ ಮೇವು ಪೂರೈಸಲಾಯಿತು.
ದಿಬ್ಬದಹಳ್ಳಿ ಗ್ರಾಮದ ದೇವರ ಎತ್ತುಗಳಿಗೆ ಮೇವು ಪೂರೈಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾನವೀತೆಯ ನೆರವು
ಕಾನಹೊಸಹಳ್ಳಿ: ಗುಡೇಕೋಟೆ, ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿರುವ ದೇವರ ಎತ್ತುಗಳಿಗೆ ಕಳೆದ ಎರಡು ತಿಂಗಳಲ್ಲಿ ಸುಮಾರು 53ಲೋಡ್ ಮೇವನ್ನು  ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸ್ವಂತ ಖರೀದಿಸಿ ಮೇವು ಪೂರೈಸುತ್ತಿದ್ದಾರೆ.
ಬೇಡ, ಕಾಡುಗೊಲ್ಲ ಬುಡಕಟ್ಟು ಆರಾಧ್ಯ ದೈವದ ದೇವರುಗಳ ಅಂದಾಜು 2 ಸಾವಿರ ಎತ್ತುಗಳಿದ್ದು, ಬೇಸಿಗೆಯಲ್ಲಿ ಮೇವಿನ ಕೊರತೆ ಕಾರಣ ಜಾನುವಾರು ಆರೈಕೆ ಮಾಡುವ ಕಿಲಾರಿಗಳು ಮತ್ತು ದೈವದ ಮುಖ್ಯಸ್ಥರು, ಶಾಸಕರಿಗೆ ಮನವಿ ಮಾಡಿದ್ದರು. 
ದೈವಸ್ಥರಿಗೆ ಗುರುವಾರ ಮತ್ತು ಶುಕ್ರವಾರ ಸೊಪ್ಪೆ, ಭತ್ತದಹುಲ್ಲು ಪೂರೈಸಿದ್ದು, ಶಾಸಕರು ಮೂಕಪ್ರಾಣಿಗಳಿಗೆ ಮಾನವೀಯತೆಯ ನೆರವು ನೀಡಿದ್ದಾರೆಂದು ದಿಬ್ಬದಹಳ್ಳಿ ವೆಂಕಟೇಶ್ ಸ್ಮರಿಸಿದ್ದಾರೆ. 
ತಮ್ಮ ಸಮುದಾಯಗಳ ಆರಾಧ್ಯದೈವಗಳ ಹೆಸರಿನಲ್ಲಿ ಭಕ್ತರು ಹರಕೆಯಿಂದ ಬಿಟ್ಟಿರುವ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಿಲ್ಲ. ದೇವರ ಎತ್ತುಗಳಿಗೆ ಸ್ಥಳೀಯವಾಗಿ ಮೇವು ಸಿಗುತ್ತಿಲ್ಲ. ಆಂಧ್ರ ಪ್ರದೇಶದ ಕಲ್ಯಾಣದುರ್ಗ, ರಾಯದುರ್ಗ ತಾಲೂಕಿನ ರೈತರಿಂದ ಮೇವು ಖರೀದಿಸಿ ತರಲಾಗುತ್ತದೆ. ಮೆಕ್ಕೆಜೋಳ ಸೊಪ್ಪೆ ಅಲಭ್ಯತೆಯಿಂದ ಭತ್ತದ ಮೇವು ಪೂರೈಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ದೇವರ ಎತ್ತುಗಳಿಗೆ ಲಕ್ಷಾಂತರ ರೂ. ನೀಡಿ ಮೇವು ಪೂರೈಸಿರುವೆ. ಮುಂಗಾರು ಮಳೆ ವಿಳಂಬವಾದರೆ ಮತ್ತೊಮ್ಮೆ ಮೇವು ಖರೀದಿ ಮಾಡಬೇಕಿದೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೊಳ್ಳುವೆ ಎಂದು ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net