ಯುವ ದಸರಾ ಉದ್ಘಾಟನೆಗೆ ಪ್ರಭುದೇವಗೆ ಆಹ್ವಾನ

 ಯುವ ದಸರಕ್ಕೆ ನೃತ್ಯಮಾಂತ್ರಿಕ ಪ್ರಭುದೇವ ಅವರನ್ನು ಆಹ್ವಾನಿಸಲಾಯಿತು. ಸೋಮಶೇಖರ್, ಅರುಣ್, ಸತ್ಯಮೂರ್ತಿ ಇನ್ನಿತರರಿದ್ದರು.
ಯುವ ದಸರಕ್ಕೆ ನೃತ್ಯಮಾಂತ್ರಿಕ ಪ್ರಭುದೇವ ಅವರನ್ನು ಆಹ್ವಾನಿಸಲಾಯಿತು. ಸೋಮಶೇಖರ್, ಅರುಣ್, ಸತ್ಯಮೂರ್ತಿ ಇನ್ನಿತರರಿದ್ದರು.
Published on
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲೇ ವರ್ಣರಂಜಿತ ಕಾರ್ಯಕ್ರಮವಾಗಿರುವ ಯುವ ದಸರಾವನ್ನು ಈ ಬಾರಿ ಖ್ಯಾತ ನೃತ್ಯಗಾರ, ನೃತ್ಯ ನಿರ್ದೇಶಕ, ನಟ, ಚಿತ್ರ ನಿರ್ದೇಶಕ ಪ್ರಭುದೇವ ಉದ್ಘಾಟಲಿಸಲಿದ್ದು, ಅವರಿಗೆ ಓಪಚಾರಿಕವಾಗಿ ಆಹ್ವಾನ ನೀಡಲಾಗಿದೆ.
ಯುವ ದಸರಾ ಸಮಿತಿ ಕಾರ್ಯಾಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿಗಳಾದ ಅರುಣ್, ಸತ್ಯಮೂರ್ತಿ ಅವರು ಚೆನ್ನೈನಲ್ಲಿರುವ ಪ್ರಭುದೇವ ಅವರ ನಿವಾಸಕ್ಕೆ ತೆರಳಿ, ಯುವ ದಸರಾ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಮಂತ್ರಿಸಿದರು. 
ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದ ಪ್ರಭುದೇವ ಅವರು, ಯುವ ದಸರಾ ಕಾರ್ಯಕ್ರಮಕ್ಕೆ ಆಗಮಿಸಲು ತಮ್ಮ ಒಪ್ಪಿಗೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಆಗಮನವು ಯುವ ದಸರಾ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net