ಅಧಿಕಾರ ಹಂಚಿಕೆ ವಿಚಾರ: ದೆಹಲಿಯಲ್ಲಿ ಮಹತ್ವದ ಹೇಳಿಕೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ! | Power sharing

 Mallikarjun Kharge
Mallikarjun Kharge
Published on
ನವದೆಹಲಿ: ಕರ್ನಾಟಕ ಸಿಎಂ ಸ್ಥಾನ ಹಂಚಿಕೆ(Power sharing) ವಿಚಾರದ ಊಹಾಪೋಹಗಳ ನಡುವೆ ಸೋನಿಯಗಾಂಧಿ ಮತ್ತು ರಾಹುಲ್​ ಗಾಂಧಿ ಜೊತೆ ಉನ್ನತ ಮಟ್ಟದ ಚರ್ಚೆ ನಡೆಸಿ ಈ ಸಮಸ್ಯೆ ಪರಿಹರಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹೇಳಿದ್ದಾರೆ.
ರಾಹುಲ್ ಮತ್ತು ಸೋನಿಯಗಾಂಧಿ ಜೊತೆ ಒಟ್ಟಿಗೆ ಕುಳಿತು ಚರ್ಚಿಸುತ್ತವೇವೆ. ಅಗತ್ಯವಿರುವ ಮಧ್ಯಸ್ಥಿಕೆಯನ್ನು ನಾವು ವಹಿಸುತ್ತೇವೆ ಎಂದಿದ್ದಾರೆ.
2023ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ "ಅಧಿಕಾರ ಹಂಚಿಕೆ" ಒಪ್ಪಂದ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 20 ರಂದು ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ 2.5 ವರ್ಷವನ್ನು ಪೂರೈಸಿದೆ. ಇತ್ತೀಚಿನ ವಾರಗಳಲ್ಲಿ ಪಕ್ಷದೊಳಗಿನ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಬಣದಾಟಗಳು ತೀವ್ರಗೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net