ವಿಂಡ್ ಪವರ್ ಯೋಜನೆಗಳಲ್ಲಿ ಭೂಮಾಲೀಕರಿಗೆ ಆದ್ಯತೆ: ಕೆ.ಜೆ. ಜಾರ್ಜ್
ಗದಗ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೆ.ಎಚ್. ಪಾಟೀಲ 101ನೇ ಜನ್ಮದಿನಾಚರಣೆ ಸಂಭ್ರಮ ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿದರು. ಎಚ್.ಕೆ. ಪಾಟೀಲ, ದಿನೇಶ ಗುಂಡೂರಾವ, ಈಶ್ವರ ಖಂಡ್ರೆ, ಶಾಸಕ ಜಿ.ಎಸ್. ಪಾಟೀಲ, ಡಿ.ಆರ್. ಪಾಟೀಲ, ಐ.ಜಿ. ಸನದಿ ಇತರರು ಇದ್ದರು.
ಗದಗ: ವಿಂಡ್ ಪವರ್ ಯೋಜನೆಗಳಲ್ಲಿ ಸ್ಥಳಿಯ ಭೂಮಾಲೀಕರಿಗೆ ಹಾಗೂ ರೈತರಿಗೆ ಆದ್ಯತೆ ನೀಡುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೆ. ಎಚ್. ಪಾಟೀಲ ಅವರ 101ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿಯೇ ಗದಗ ಜಿಲ್ಲೆಯಲ್ಲಿ ವಿಂಡ್ ಪವರ್ ಅತ್ಯಧಿಕ ಉತ್ಪಾದನೆ ಆಗುತ್ತಿದ್ದು, ಉತ್ಪಾದನೆಯಲ್ಲಿ ಭೂಮಾಲೀಕರಾದ ರೈತರಿಗೂ ಪಾಲು ಸಿಗಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಅವರು ಇಂದನ ಸಚಿವ ಕೆ. ಜೆ. ಜಾರ್ಜ್ ಅವರಿಗೆ ವೇದಿಕೆಯಲ್ಲಿ ಮನವಿ ಮಾಡಿದ್ದರು. ಎಚ್.ಕೆ. ಪಾಟೀಲ ಮನವಿಗೆ ವೇದಿಕೆಯಲ್ಲೇ ಸ್ಪಂಧಿಸಿದ ಜಾರ್ಜ್ ಅವರು ವಿಂಡ್ ಮಿಲ್ ಸ್ಥಾಪನೆಗೆ ಸಂಬಂಧಿಸಿದಂತೆ ಸ್ಥಳಿಯ ರೈತರು ಮತ್ತು ಭೂಮಾಲೀಕರು ಪಾಲುದಾರರಾಗುವಂತೆ ನೀತಿ ರೂಪಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ವಿಂಡ್ ಪವರ್ ಅಗತ್ಯತೆ ಅಧಿಕವಿದೆ. ರೈತರು ತಮ್ಮ ಜೀಮಿನನ್ನು ಗಾಳಿ ವಿದ್ಯುತ್ ಯಂತ್ರ ಸ್ಥಾಪಿಸುವ ಕಂಪನಿಗಳೆ ನೀಡುತ್ತಿದ್ದಾರೆ. ಗಾಳಿ ವಿದ್ಯುತ್ ಕಂಪನಿ ಉತ್ಪಾಧಿಸುವ ವಿದ್ಯುತ್ ಅಥವಾ ಲಾಭದಲ್ಲಿ ರೈತರಿಗೂ ಪಾಲಿ ನೀಡಿ ರೈತರನ್ನು ಆಥಿರ್ಕ ಸ್ವಾವಲಂಭಿ ಆಗಿಸುವಲು ಸರ್ಕಾರ ಬದ್ಧವಿದೆ. ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗಾಗಲೇ 2500 ಮೆಗಾವಾಟ್ ವಿಂಡ್ ಪವರ್ ಉತ್ಪಾದನೆಗಾಗಿ ಟೆಂಡರ್ ನೀಡಲಾಗಿದೆ. ಇದರಿಂದ ಅಂದಾಜು 10 ಸಾವಿರ ಕೋಟಿ ರೂಪಾಯಿ ಹೂಡಿಕೆ ರಾಜ್ಯಕ್ಕೆ ಬರಲಿದ್ದು, ವಿದ್ಯುತ್ ಉತ್ಪಾದನೆ ಹೆಚ್ಚುವ ಜೊತೆಗೆ ರೈತರಿಗೆ ಸಹ ಲಾಭವಾಗಲಿದೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ವಿದ್ಯುತ್ ಸಬ್ಸಿಡಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನೆರವು ನೀಡುತ್ತಿವೆ. ಗೃಹಜ್ಯೋತಿ ಸೇರಿದಂತೆ ಉಚಿತ ವಿದ್ಯುತ್ ಯೋಜನೆಗಳಿಗೆ ವರ್ಷಕ್ಕೆ ಅಂದಾಜು 33 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತಿದೆ ಎಂದು ವಿವರಿಸಿದರು. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ. ರೈತರು ಉತ್ಪಾದನೆ ಹೆಚ್ಚಿಸಿದಷ್ಟು ರಾಜ್ಯದ ಆಥಿರ್ಕತೆಗೂ ಬಲ ಸಿಗುತ್ತದೆ ಎಂದು ಜಾರ್ಜ್ ಹೇಳಿದರು.
ಇದೇ ವೇಳೆ ದಿವಂಗತ ಕೆ.ಎಚ್. ಪಾಟೀಲ್ ಅವರ ಸೇವೆಯನ್ನು ಸ್ಮರಿಸಿದ ಅವರು, ಅವರ ತತ್ವಗಳು ಹಾಗೂ ಜನಪರ ರಾಜಕೀಯ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಚಿವರಾದ ಎಚ್.ಕೆ. ಪಾಟೀಲ, ದಿನೇಶ ಗುಂಡೂರಾವ, ಈಶ್ವರ ಖಂಡ್ರೆ, ಶಾಸಕ ಜಿ.ಎಸ್. ಪಾಟೀಲ, ಡಿ.ಆರ್. ಪಾಟೀಲ ಇತರರು ಇದ್ದರು.