ಭೀಮೆಗೆ ನೀರು ಹರಿಸಿ, 7 ಗಂಟೆ ವಿದ್ಯುತ್​ ಕೊಡಿ

ಜನ-ಜಾನುವಾರುಗಳಿಗೆ ಕುಡಿಯಲು ನೀರು ಕಲ್ಪಿಸುವ ನಿಟ್ಟಿನಲ್ಲಿ ಭೀಮಾ ನದಿಗೆ ನೀರು ಹರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಫಜಲಪುರ ತಹಸಿಲ್​ ಕಚೇರಿ ಎದುರು ಪ್ರಾಂತ ರೈತ ಸಂ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಶ್ರೀಮಂತ ಬಿರಾದಾರ, ರಮೇಶ ಶೆಟ್ಟಿ, ಶಾಂತಕುಮಾರ ಅಂಜುಟಗಿ, ಗುರು ಚಾಂದಕವಟೆ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಅಫಜಲಪುರದಲ್ಲಿ ಪ್ರಾಂತ ರೈತ ಸಂಘ, ಕಬ್ಬು ಬೆಳೆಗಾರರ ಸಂಘದಿಂದ ಹೋರಾಟ
ಅಫಜಲಪುರ: ಬೇಸಿಗೆ ಇರುವುದರಿಂದ ವಾಣಿಜ್ಯ ಬೆಳೆ ಕಬ್ಬು, ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಹೀಗಾಗಿ ಕೂಡಲೇ ಭೀಮಾ ನದಿಗೆ ನೀರು ಹರಿಸುವುದರ ಜತೆಗೆ ನಿರಂತರ 7 ಗಂಟೆ ವಿದ್ಯುತ್​ ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ ಆಗ್ರಹಿಸಿದರು.
ಪ್ರಾಂತ ರೈತ ಸಂ ಹಾಗೂ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂದಿಂದ ತಹಸಿಲ್​ ಕಚೇರಿ ಎದುರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಳ್ಳಗಿ (ಬಿ) ಮತ್ತು ಅಳ್ಳಗಿ (ಕೆ) ಗ್ರಾಮಗಳ ಮಧ್ಯೆ ಬೃಹತ್​ ಬಾಂದಾರು ನಿರ್ಮಿಸಬೇಕು. ಇದರಿಂದ ಸುಮಾರು 11 ಗ್ರಾಮಗಳಿಗೆ ಅನುಕೂಲವಾಗುತ್ತದೆ. ಏತ ನೀರಾವರಿಯ ಕಾಲುವೆಗಳನ್ನು ಸ್ವಚ್ಛಗೊಳಿಸಿ ನೀರು ಹರಿಸಬೇಕು. ೂಳನೂರ ಹತ್ತಿರ ನಿರ್ಮಿಸಿರುವ ಬ್ರಿಡ್ಜ್​ ಕಂ ಬ್ಯಾರೇಜ್​ಗೆ ಗೇಟ್​ ಅಳವಡಿಸಿ ನೀರು ತಡೆಹಿಡಿಯಬೇಕು. 2026-27ನೇ ಸಾಲಿನ ಎಫ್​ಆರ್​ಪಿ ದರ ಮರು ಪರಿಶೀಲಿಸಬೇಕು. ಹಾವು ಕಡಿತದಿಂದ ಮರಣ ಹೊಂದಿರುವ ಮಾತೋಳಿ ಗ್ರಾಮದ ರೈತ ಸೈಬಣ್ಣ ಜಮಾದಾರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್​ ಸಂಜೀವಕುಮಾರ ದಾಸರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ರಮೇಶ ಶೆಟ್ಟಿ, ಶಾಂತಕುಮಾರ ಅಂಜುಟಗಿ, ಗುರು ಚಾಂದಕವಟೆ, ರಮೇಶ ಪಾಟೀಲ, ಭೀಮರಾವ ಗೌರ, ಮಲ್ಲಣ್ಣ ರೋಡಗಿ, ಅರ್ಜುನ ಸೋಮಜಾಳ, ಶರಣಪ್ರಸಾದ ನೂಲಾ, ಭೀಮನಗೌಡ ಬಿರಾದಾರ, ರಾಜಕುಮಾರ ಬಡದಾಳ, ಅಣ್ಣಾರಾವ ಪಾಟೀಲ್​, ಲತೀಫ್​ ಪಟೇಲ್​, ಕಲ್ಲಪ್ಪ ಅಂಜುಟಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net