ಪಾಳ್ಯದ ದೊಡ್ಡ-ಚಿಕ್ಕ ಕೆರೆಗೆ ನೀರು ಹರಿಸಿ

ಪಾಳ್ಯದ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ  ಕೆರೆಗಳ ಅಚ್ಚುಕಟ್ಟುದಾರರು ಗುರುವಾರ ಪ್ರತಿಭಟನೆ ನಡೆಸಿದರು. ಹರೀಶ್ ಕುಮಾರ್, ಮಧುಶೇಖರ್ ನಾಯಕ, ಬಸವೇಶ, ಬಸವರಾಜಪ್ಪ, ದೊಡ್ಡ ಸಿದ್ದನಾಯಕ, ದೊಡ್ಡರಾಜ ನಾಯಕ, ದುಂಡು ಮಾದನಾಯಕ ಇದ್ದರು.
ಪಾಳ್ಯದ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ಕೆರೆಗಳ ಅಚ್ಚುಕಟ್ಟುದಾರರು ಗುರುವಾರ ಪ್ರತಿಭಟನೆ ನಡೆಸಿದರು. ಹರೀಶ್ ಕುಮಾರ್, ಮಧುಶೇಖರ್ ನಾಯಕ, ಬಸವೇಶ, ಬಸವರಾಜಪ್ಪ, ದೊಡ್ಡ ಸಿದ್ದನಾಯಕ, ದೊಡ್ಡರಾಜ ನಾಯಕ, ದುಂಡು ಮಾದನಾಯಕ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಳ್ಯದ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆ
  • ನೀರು ಹರಿಸುವಂತೆ ಒತ್ತಾಯಿಸಿ

ಕೊಳ್ಳೇಗಾಲ:

ತಾಲೂಕಿನ ಪಾಳ್ಯದ ದೊಡ್ಡ ಕೆರೆ ಮತ್ತು ಚಿಕ್ಕ ಕೆರೆಗೆ ನೀರು ಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ಕೆರೆಗಳ ಅಚ್ಚುಕಟ್ಟುದಾರರು ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ನೀರಾವರಿ ಕಚೇರಿ ಮುಂಭಾಗ ಜಮಾಯಿಸಿದ ರೈತರು, ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಹರೀಶ್ ಕುಮಾರ್ ಮಾತನಾಡಿ, ಪಾಳ್ಯ ಗ್ರಾಮದ ಕೆರೆಗಳಿಗೆ ನೀರು ಬಿಡದ ಕಾರಣ ದನ-ಕರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಈ ನಡುವೆ ಕಬಿನಿ ಜಲಾಶಯದಿಂದ 15 ದಿನಗಳಿಂದ ಚಾನಲ್ ಮೂಲಕ ಕಾವೇರಿ ನದಿಗೆ ಹರಿಸಲಾಗುತ್ತಿದೆ. ನಿಗದಿತ ಸಮಯಕ್ಕೆ ಮಳೆಯಾಗದ ಪರಿಣಾಮ ಸಾವಿರಾರು ಎಕರೆ ಜಮೀನು ಒಣಗುತ್ತಿದೆ. ದನ-ಕರುಗಳಿಗೆ ನೀರು ಬಿಡಿ ಎಂದು ಹಲವು ಬಾರಿ ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಕಚೇರಿಗೆ ಬಂದರೆ ನೀರಾವರಿ ಇಲಾಖೆ ಅಧಿಕಾರಿಗಳು ಸಿಗುತ್ತಿಲ್ಲ. ಸಭೆಗಳಿಗೆ ತೆರಳಿದ್ದಾರೆ ಎಂದು ಸಿಬ್ಬಂದಿ ಸಬೂಬು ಹೇಳುತ್ತಾರೆ. ರೈತರ ಕಷ್ಟವನ್ನು ಕೇಳುವವರು ಯಾರು. ಕೂಡಲೇ ಚಿಕ್ಕಿಂದುವಾಡಿ ಸಮೀಪವಿರುವ 59ನೇ ತೂಬನ್ನು ತೆರೆಯಬೇಕು. ಆ ಮೂಲಕ ಪಾಳ್ಯ ಕೆರೆಗಳನ್ನು ತುಂಬಿಸಬೇಕು. ಇಲ್ಲವಾದರೂ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಇಂಜಿನಿಯರ್‌ಗಳು ಬರಬೇಕು. ನೀರು ಬಿಡುವ ಭರವಸೆ ನೀಡಬೇಕು. ಇಲ್ಲವಾದರೆ ದನ-ಕರುಗಳನ್ನು ಕಚೇರಿ ಮುಂದೆ ತರಲಾಗುವುದು ಎಂದು ಪಟ್ಟು ಹಿಡಿದರು.
ಕೊನೆಗೆ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಉಮೇಶ್ ಅವರು ದೂರವಾಣಿ ಮೂಲಕ ಪಾಳ್ಯ ಕೆರೆಗೆ ಭೇಟಿ ನೀಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಕಚೇರಿಯ ಟೆಕ್ನಿಕಲ್ ಅಸಿಸ್ಟೆಂಟ್ ಪುಣ್ಯಶ್ರೀ ಅವರಿಗೆ ರೈತರು ಮನವಿ ಪತ್ರ ಸಲ್ಲಿಸಿ ಹೋರಾಟವನ್ನು ಕೈಬಿಟ್ಟರು.
ಪ್ರತಿಭಟನೆಯಲ್ಲಿ ಪಾಳ್ಯ ಗ್ರಾಮದ ಹರೀಶ್ ಕುಮಾರ್, ಮಧುಶೇಖರ್ ನಾಯಕ, ಬಸವೇಶ, ಬಸವರಾಜಪ್ಪ, ದೊಡ್ಡ ಸಿದ್ದನಾಯಕ, ದೊಡ್ಡರಾಜ ನಾಯಕ, ದುಂಡು ಮಾದನಾಯಕ, ಕುನ್ನ ನಾಯಕ, ಮಾದೇಶ್, ತಂಬಡಿ ಶಿವಮಲ್ಲಪ್ಪ, ಬಾಲ ಕುಮಾರ್‌ಮೋಹನ್, ಬಾಬು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net