ಕೆ.ಆರ್ ರಸ್ತೆಯ ಕೆಇಬಿ ವೃತ್ತದಿಂದ ಬಸವೇಶ್ವರ ವೃತ್ತದವರಿಗೆ ಮೀಡಿಯನ್ ಸರ್ಕಲ್ ಅಭಿವೃದ್ಧಿ, ಪಾದಚಾರಿ ಮಾರ್ಗ ಹಾಗೂ ಗಿಡ ನೆಡುವುದರ ಕಾಮಗಾರಿ 98.50 ಲಕ್ಷ, ಕೆಇಬಿ ವೃತ್ತದಿಂದ ಬಸವಣ್ಣ ಪ್ರತಿಮೆವರೆಗೆ ಎರಡು ಭಾಗಗಳಲ್ಲಿ ಮಳೆ ನೀರು ಚರಂಡಿ ನಿಮಾರ್ಣ ಮೊತ್ತ 30 ಲಕ್ಷ, ಕೆ.ಆರ್ ರಸ್ತೆಯ ಕೆಇಬಿ ವೃತ್ತದಿಂದ ಬಸವಣ್ಣ ಪ್ರತಿಮೆವರಿಗೆ ಪಾದಚಾರಿ ಮಾರ್ಗ, ಗ್ರೀಲ್ವರ್ಕ್, ಗಿಡ ನೆಡುವು ವೆಚ್ಚ 48.20 ಲಕ್ಷ ರೂ, ಸಿಸಿ ಚರಂಡಿ ಸರ್ಕಲ್ ನಿಮಾರ್ಣ ಇತರೆ ಉಳಿಕೆ ಅಭಿವೃದ್ಧಿ ಮೊತ್ತ 72 ಲಕ್ಷ ರೂ., ಮರು ಡಾಂಬರೀಕರಣ 87 ಲಕ್ಷ ರೂ., ಕೆ.ಆರ್ ರಸ್ತೆಯ ಜೆಸಿ ವೃತ್ತದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮೊತ್ತ 20 ಲಕ್ಷ ರೂ., ರಸ್ತೆ ಮಧ್ಯದಲ್ಲಿ ವಿದ್ಯುತ್ ದೀಪ ಅಳಡಿಸಲು 15 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಆದರೆ, ಕಳಪೆ ಕಾಮಗಾರಿ ಮಾಡಿ ರಸ್ತೆಯಲ್ಲಿ ತೆಗದ ಮಣ್ಣು, ಕಲ್ಲು ಇವುಗಳನ್ನು ಹೊರಗಡೆ ಹಾಕಿಸದೆ ನಗರಸಭೆಯ ಪಾರ್ಕ್ನಲ್ಲಿ ಹಾಕಿಸಿ ಕರ್ತವ್ಯ ಲೋಪ ಎಸೆಗಿದ್ದಾರೆ ಎಂದು ಆರೋಪಿಸಿ ಅಂದಿನ ಪೌರಾಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹೋರಾಟಗಾರ ಕೆ.ನಾಗರಾಜ್ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.