ಬೆಲೆ ಕುಸಿತಕ್ಕೆ ದಾಳಿಂಬೆ ಬೆಳೆಗಾರರು ಕಂಗಾಲು

Pomegranate growers distressed by price slump.
Pomegranate growers distressed by price slump.
Published on

ಗುಡಿಬಂಡೆ:

ಕೃಷಿಕರು ಇತ್ತೀಚೆಗೆ ದಾಳಿಂಬೆ ಬೆಳೆಯತ್ತ ಮುಖ ಮಾಡಿದ್ದು, ಭಾರೀ ಪ್ರಮಾಣದಲ್ಲಿ ಬೆಲೆ ಕುಸಿದಿರುವುದು ಆತಂಕ ಹೆಚ್ಚಿಸಿದೆ.

ಹೆಚ್ಚು ಖರ್ಚು

ದಾಳಿಂಬೆ ಬೆಳೆ ಬೆಳೆಯುವುದು ಸುಲಭದ ಮಾತೇನಲ್ಲ. ಸಿಂಪಡಿಸುವ ಔಷಧ ಹೆಚ್ಚಿನ ಬೆಲೆಯದ್ದಾಗಿರುತ್ತದೆ. ನೀರು ಪೂರೈಕೆ, ಗೊಬ್ಬರ, ಕಳೆ ಕೀಳುವುದು, ಕಾಲಕ್ಕೆ ಅನುಗುಣವಾಗಿ ಔಷಧ ಸಿಂಪಡಣೆ ಇವೆಲ್ಲ ಆಗಬೇಕು. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಕೀಟಗಳ ಹತೋಟಿಗೆ ಕ್ರಮ ವಹಿಸುವುದಲ್ಲದೆ, ಪಗಳ ಕಾಟ ತಪ್ಪಿಸಲು ಸಂಪೂರ್ಣ ತೋಟಕ್ಕೆ ಲಕ್ಷ ಲಕ್ಷ ಹಣ ವ್ಯಯ ಮಾಡಿ ನೆಟ್​ ಅಳವಡಿಸಬೇಕು.

ಉತ್ತಮ ಇಳುವರಿ ಬಂದಿದೆ ಎಂಬ ಖುಷಿ ಒಂದೆಡೆಯಾದರೆ, ಪ್ರತಿ ಕೆ.ಜಿ.ಗೆ 150 ರೂ. ಇದ್ದ ಬೆಲೆ ದಿಢೀರನೆ ಕುಸಿತ ಕಂಡಿರುವುದು ಆಘಾತ ತಂದಿದೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ಬೇರೆ ಬೇರೆ ತಾಲೂಕುಗಳು ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ದಾಳಿಂಬೆ ಬೆಳೆ ಹೆಚ್ಚಾಗಿ ಬೆಳೆಯುತ್ತಿದ್ದಾರೆ.

ಲಾಂತರ ರೂ. ಖರ್ಚು ಮಾಡಿ ಏಳೆಂಟು ಎಕರೆಯಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದೇನೆ, ಉತ್ತಮ ಇಳುವರಿ ಸಹ ಬಂದಿದೆ. ಈ ಬಾರಿ ದಾಳಿಂಬೆಗೆ ಉತ್ತಮ ಬೆಲೆ ಬರುತ್ತೆ, ಮಾಡಿರುವ ಸಾಲ ತೀರಿಸಬಹುದು ಎಂಬ ನಿರೀೆಯಲ್ಲಿದ್ದೆವು. ಆದರೆ, ಏಕಾಏಕಿ ಬೆಲೆ ಕುಸಿದಿದೆ. ಇದರಿಂದ ನಷ್ಟ ಅನುಭವಿಸುವಂತಾಗಿದೆ. ಕನಿಷ್ಠ ಪಕ್ಷ ಸರ್ಕಾರವಾದರೂ ದಾಳಿಂಬೆ ಬೆಳೆಗಾರರಿಗೆ ಪರಿಹಾರ ನೀಡಬೇಕು.

— ಪ್ರಕಾಶ್​, ಯುವ ರೈತ, ಚಿಕ್ಕನಾಗೇಲಿ.

ಇದರ ಜತೆಗೆ ಬೆಳೆ ಉತ್ತಮ ಇಳುವರಿ ಬರುತ್ತಿರುವ ಕಾರಣ ಮಾರುಕಟ್ಟೆಗೆ ದಾಳಿಂಬೆ ಸರಬರಾಜು ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಬೆಲೆ ಕುಸಿತಕ್ಕೆ ಕಾರಣ

ಇತ್ತೀಚೆಗೆ ಹೆಚ್ಚುಮಂದಿ ದಾಳಿಂಬೆ ಬೆಳೆಯನ್ನು ಬೆಳೆಯುತ್ತಿರುವುದು

ಮಾರುಕಟ್ಟೆಗೆ ಏಕಾಏಕಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಸರಬರಾಜು ಆಗುತ್ತಿರುವುದು.

ಉತ್ತಮ ಇಳುವರಿ ಬಂದಿರುವುದು ಸೇರಿ ನಾನಾ ಕಾರಣಗಳಿವೆ.

ತಾಲೂಕಿನ 395 ಹೆಕ್ಟೇರ್​ ಪ್ರದೇಶದಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದು, ಜುಲೈನಲ್ಲಿ ಪ್ರತಿ ಕೆಜಿ ದಾಳಿಂಬೆಗೆ ತೋಟದಲ್ಲಿ ಸುಮಾರು 150ರೂ. ಗೂ ಹೆಚ್ಚು ಬೆಲೆ ಇತ್ತು. ಆದರೆ, ಈ ವಾರ ಕೇವಲ ಪ್ರತಿ ಕೆ.ಜಿ.ಹಣ್ಣಿಗೆ 70ರೂ. ಇಳಿಕೆ ಕಂಡಿದೆ. ಸಾಲ ಮಾಡಿ ಬೆಳೆದ ರೈತರು ಕಂಗಾಲಾಗಿದ್ದು, ಸರ್ಕಾರ ದಾಳಿಂಬೆ ಬೆಳೆಗಾರರ ನೆರವಿಗೆ ಧಾವಿಸಿ ಪರಿಹಾರ ೂಷಣೆ ಮಾಡಬೇಕು ಎಂಬುದು ಬೆಳೆಗಾರರ ಆಗ್ರಹವಾಗಿದೆ.

ತಾಲೂಕಿನಲ್ಲಿ ಸುಮಾರು 395 ಹೆಕ್ಟೇರ್​ಗೂ ಹೆಚ್ಚು ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ. ಇತ್ತೀಚೆಗೆ ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲೂಕುಗಳಲ್ಲಿ ಜಮೀನುಗಳನ್ನು ಬೇರೆ ಬೇರೆ ಜಿಲ್ಲೆಗಳವರು ಲೀಸ್​ಗೆ ಹಾಕಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಬೆಳೆ ಹೆಚ್ಚಾಗಿರುವುದರಿಂದ ಬೆಲೆ ಕುಸಿದಿರಬಹುದು.

— ಎ.ಗಾಯತ್ರಿ, ಪ್ರಭಾರಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ, ಗುಡಿಬಂಡೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net