ಸುಸ್ಥಿರ ಅಭಿವೃದ್ಧಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಪಾತ್ರ ಗಮನಾರ್ಹ; ನರೇಂದ್ರಸ್ವಾಮಿ ಅಭಿಮತ

ಕೆಎಸ್‌ಪಿಸಿಬಿ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಈಶ್ವರ ಖಂಡ್ರೆ ಉದ್ಘಾಟಿಸಿದರು. ಪಿ.ಎಂ.ನರೇಂದ್ರಸ್ವಾಮಿ, ಶಾಲಿನಿ ರಜನೀಶ್ ಮತ್ತಿತರರಿದ್ದರು.
ಕೆಎಸ್‌ಪಿಸಿಬಿ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಈಶ್ವರ ಖಂಡ್ರೆ ಉದ್ಘಾಟಿಸಿದರು. ಪಿ.ಎಂ.ನರೇಂದ್ರಸ್ವಾಮಿ, ಶಾಲಿನಿ ರಜನೀಶ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ಸಂರಕ್ಷಣೆ ಮತ್ತು ಕರ್ನಾಟಕದ ಸುಸ್ಥಿರ
  • ಅಭಿವೃದ್ಧಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಾತ್ರ
  • ಕೆಎಸ್‌ಪಿಸಿಬಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದ್ದಾರೆ.

ಬೆಂಗಳೂರು:ಪರಿಸರ ಸಂರಕ್ಷಣೆಮತ್ತು ಕರ್ನಾಟಕದ ಸುಸ್ಥಿರಅಭಿವೃದ್ಧಿಗೆ ಪರಿಸರ ಮಾಲಿನ್ಯನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಯಪಾತ್ರ ಅತ್ಯಂತ ಮಹತ್ವದ್ದು.ಕಳೆದ ಐದುದಶಕಗಳಲ್ಲಿ ಕೆಎಸ್‌ಪಿಸಿಬಿಸುಸ್ಥಿರ ಪ್ರಗತಿಯಲ್ಲಿ ಪ್ರಮುಖಪಾತ್ರ ನಿರ್ವಹಿಸಿದ್ದು,ಕೈಗಾರಿಕೆಗಳು,ನಗರ ಸಂಸ್ಥೆಗಳುಮತ್ತು ನಾಗರಿಕರನ್ನು ಶುದ್ಧತಂತ್ರಜ್ಞಾನ,ಉತ್ತಮ ತ್ಯಾಜ್ಯನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯತ್ತಕೊಂಡೊಯ್ದಿದೆ ಎಂದು ಕೆಎಸ್‌ಪಿಸಿಬಿಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿಹೇಳಿದ್ದಾರೆ.

ಕೆಎಸ್‌ಪಿಸಿಬಿಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದಸರ್ಕ್ಯೂಲರ್ ಅರ್ಥವ್ಯವಸ್ಥೆಮತ್ತು ಸ್ಥಿರತೆ ಎಂಬ ವಿಶೇಷಕಾರ್ಯಾಗಾರದಲ್ಲಿ ಪ್ರಾಸ್ತಾವಿಕವಾಗಿಮಾತನಾಡಿದರು.

ನವೀನತಂತ್ರಜ್ಞಾನ,ಉತ್ತಮ ತ್ಯಾಜ್ಯನಿರ್ವಹಣೆ ಮತ್ತು ಜವಾಬ್ದಾರಿಇರುವ ಪರಿಸರ ಸಂರಕ್ಷಣೆಯ ಕಡೆಗೆಮುನ್ನಡೆಯಲು ಸಮ್ಮೇಳನ ಪೂರಕವಾಗಿದೆ.ಈ ಹಿಂದೆಕೆಎಸ್‌ಪಿಸಿಬಿ ಕೈಗಾರಿಕಾ ಮಾಲಿನ್ಯನಿಯಂತ್ರಣ ಸಮಸ್ಯೆಗಳನ್ನುಎದುರಿಸಿದ್ದು,ಇಂದು ಹವಾಮಾನಸ್ಥಿರತೆ ಮತ್ತು ಸಂಪನ್ಮೂಲಕಾರ್ಯಕ್ಷಮತೆ ಎಂಬ ಹೊಸ ಸವಾಲುಗಳನ್ನುಎದುರಿಸುತ್ತಿದೆ.ತ್ಯಾಜ್ಯವನ್ನುಕಡಿಮೆ ಮಾಡಿ,ವಸ್ತುಗಳಮರುಬಳಕೆಯನ್ನು ಗರಿಷ್ಠಗೊಳಿಸಿ,ಸಂಪನ್ಮೂಲಗಳನ್ನುದೀರ್ಘಕಾಲ ಬಳಸುವುದರಿಂದ ನೈಸರ್ಗಿಕಸಂಪನ್ಮೂಲ ಸಂರಕ್ಷಣೆ ಮತ್ತುಪರಿಸರ ಸುಧಾರಣೆ ಸಾಧ್ಯವಾಗುತ್ತದೆ.ಕೆಎಸ್‌ಪಿಸಿಬಿಕೇವಲ ಮಾಲಿನ್ಯ ನಿಯಂತ್ರಕಸಂಸ್ಥೆಯಲ್ಲ.ಬದಲಾವಣೆಗೆಪ್ರೇರಕ ಶಕ್ತಿಯಾಗಿಯೂಕಾರ್ಯನಿರ್ವಹಿಸುತ್ತಿದೆ.ಸರ್ಕಾರ ಕೈಗಾರಿಕೆಅಕಾಡೆಮಿಯ ನಡುವೆ ಸಹಕಾರದ ಸೇತುವೆನಿರ್ಮಿಸಿ, ಶುದ್ಧಉತ್ಪಾದನೆ ಮತ್ತು ಆರ್ಥಿಕತೆಯನ್ನುಉತ್ತೇಜಿಸುವ ಕೆಲಸ ಮಾಡುತ್ತಿದೆಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿಸರ್ಕಾರದ ಮುಖ್ಯ ಕಾರ್ಯದರ್ಶಿಡಾ. ಶಾಲಿನಿರಜನೀಶ್, ನ್ಯಾ.ಸುಭಾಷ್ ಬಿ.ಅಡಿ,ರಾಜ್ಯ ಗ್ಯಾರಂಟಿಯೋಜನೆಗಳ ಅನುಷ್ಠಾನ ಪ್ರಾಧಿಕಾರದರಾಜ್ಯ ಉಪಾಧ್ಯಕ್ಷ ಹಾಗೂ ಶಾಸಕದಿನೇಶ್ ಗೂಳಿಗೌಡ,ಮಂಡಳಿ ಸದಸ್ಯಶರಣಕುಮಾರ ಮೋದಿ,ಪ್ರಧಾನ ಕಾರ್ಯರ್ಶಿಶ್ರೀನಿವಾಸುಲು ಮತ್ತಿತರರುಪಾಲ್ಗೊಂಡಿದ್ದರು.

ಸಂಪನ್ಮೂಲಸಂರಕ್ಷಣೆಗೆ ಪುನರ್ ಬಳಕೆ ಅವಶ್ಯ

ನೈಸರ್ಗಿಕಸಂಪನ್ಮೂಲಗಳ ಸುದೀರ್ಘ ಬಳಕೆಮತ್ತು ಸಂರಕ್ಷಣೆಗಾಗಿ ಮರು ಬಳಕೆಮತ್ತು ಪುನರ್ ಬಳಕೆಗೆ ಒತ್ತುನೀಡಬೇಕು ಎಂದು ಅರಣ್ಯ,ಜೀವಿಶಾಸ್ತ್ರಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.

ಪ್ರಕೃತಿಮತ್ತು ಪ್ರಗತಿ ಎರಡೂ ಅವಶ್ಯಎಂಬುದು ನಮ್ಮ ಸರ್ಕಾರದ ನಿಲುವು.ಆ ಕಾರಣಕ್ಕೆ ಸುಸ್ಥಿರ ಅಭಿವೃದ್ಧಿಗೆ ಒತ್ತುನೀಡಲಾಗಿದೆ.ಆದ್ದರಿಂದ ಉತ್ತಮರೂಢಿಗಳನ್ನು ಅಳವಡಿಸಿಕೊಂಡುಪ್ರಗತಿಯ ಪಥದಲ್ಲಿ ಸಾಗುವುದರಜೊತೆಗೆ ಪ್ರಕೃತಿ ಕಾಳಜಿಯನ್ನುಮೆರೆಯಬೇಕಿದೆ.ಹವಾಮಾನ ಬದಲಾವಣೆಮತ್ತು ಜಾಗತಿಕ ತಾಪಮಾನ ಏರಿಕೆಯಪರಿಣಾಮಗಳನ್ನು ಜಗತ್ತುಎದುರಿಸುತ್ತಿದೆ.ಮರುಬಳಕೆ,ದುರಸ್ತಿ,ಪುನರ್ ಬಳಕೆಯಮೂಲಕ ಭೂಮಿಯನ್ನು ಸಂರಕ್ಷಿಸಿಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಿದೆಎಂದು ಖಂಡ್ರೆ ವಿವರಿಸಿದರು.

ಕಾರ್ಯಾಗಾರದಲ್ಲಿಚರ್ಚೆಯಾದ ವಿಷಯಗಳು

ಸರ್ಕ್ಯುಲರ್ಅರ್ಥವ್ಯವಸ್ಥೆ ಮತ್ತು ಸ್ಥಿರತೆಕುರಿತ ವಿಶೇಷ ಕಾರ್ಯಾಗಾರದಲ್ಲಿಪರಿಸರ ಮಾಲಿನ್ಯ ನಿಯಂತ್ರಣ,ತ್ಯಾಜ್ಯ ನಿರ್ವಹಣೆ,-ತ್ಯಾಜ್ಯನಿಯಂತ್ರಣ,ಪುನರುಪಯೋಗವ್ಯವಸ್ಥೆಗಳು ಹಾಗೂ ಸ್ಥಳೀಯಸಂಸ್ಥೆಗಳ ಪಾತ್ರದ ಬಗ್ಗೆವಿಷಯತಜ್ಞರು ಮಾಹಿತಿ ನೀಡಿದರು.

ತ್ಯಾಜ್ಯವಿಂಗಡನೆ, ಕಸದಿಂದಸಂಪತ್ತು ತಯಾರು ಮಾಡುವ ಮಾದರಿಯೋಜನೆಗಳು,ಸರ್ಕಾರಿ ಇಲಾಖೆಗಳನಡುವೆ ಸಮನ್ವಯ,ಹಾಗೂ ಪುನರ್ಉತ್ಪತ್ತಿ ತಂತ್ರಜ್ಞಾನಗಳಅಭಿವೃದ್ಧಿ ಬಗ್ಗೆ ಅಂಕಿ ಅಂಶಗಳಸಹಿತ ತಜ್ಞರು ವಿಷಯ ಮಂಡಿಸಿದರು.

ಸರ್ಕಾರದಹಿರಿಯ ಅಧಿಕಾರಿಗಳು,ಜಿಬಿಎ,ಬಿಡಬ್ಲೂೃಎಸ್‌ಎಸ್‌ಬಿ,ಬಿಡಿಎ,ಸಿಇಇಎನ್‌ಆರ್,ಐಎಸ್‌ಇಸಿ,ಐಐಎಂಬಿ ಮತ್ತಿತರಸಂಸ್ಥೆಗಳ ಪ್ರತಿನಿಧಿಗಳು,ಹೊರರಾಜ್ಯಗಳತಜ್ಞರು ಮಹತ್ವದ ಸಲಹೆ ನೀಡಿದರು.

ಕೆಎಸ್‌ಪಿಸಿಬಿ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಸಂವಾದವು ಮುಂದಿನ ಐವತ್ತು ವರ್ಷಗಳ ಪರಿಸರ ಕಾರ್ಯಚಟುವಟಿಕೆಗಳಿಗೆ ಗುರಿ ನೀಡಲಿದೆ. ಮುಂದಿನ ಪೀಳಿಗೆಗೆ ಹಸಿರು, ಸ್ವಚ್ಛ, ಸುಸ್ಥಿರ ರಾಜ್ಯವನ್ನು ನಿರ್ಮಿಸುವ ಗುರಿಯೊಂದಿಗೆ. ಕಳೆದ ಒಂದು ತಿಂಗಳಲ್ಲಿ ರಾಜ್ಯದ 25 ಜಿಲ್ಲೆಗಳಲ್ಲಿ 14 ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net