ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಸಲ್ಲ

ರಬಕವಿ-ಬನಹಟ್ಟಿ ಸಮೀಪದ ಕಷ್ಣಾ ನದಿ ತೀರದಲ್ಲಿ ಮಹೀಷವಾಡಗಿ ಸೇತುವೆ ಕಾಮಗಾರಿ ಸ್ಥಳಕ್ಕೆ ಗುರುವಾರ ಶಾಸಕ ಸಿದ್ದು ಸವದಿ ಭೇಟಿ ನೀಡಿ, ವೀಕ್ಷಿಸಿದರು. ಮಹದೇವ ದೂಪದಾಳ, ಶ್ರೀಶೈಲ ಬೀಳಗಿ, ರಿಜ್ವಾನ್ ಅಹ್ಮದ್, ವೇಣುಗೋಪಾಲ, ಬಾಬಾಗೌಡ ಪಾಟೀಲ, ಸಂಜಯ ತೆಗ್ಗಿ, ಸುರೇಶ ಅಕ್ಕಿವಾಟ ಇತರರಿದ್ದರು.
ರಬಕವಿ-ಬನಹಟ್ಟಿ ಸಮೀಪದ ಕಷ್ಣಾ ನದಿ ತೀರದಲ್ಲಿ ಮಹೀಷವಾಡಗಿ ಸೇತುವೆ ಕಾಮಗಾರಿ ಸ್ಥಳಕ್ಕೆ ಗುರುವಾರ ಶಾಸಕ ಸಿದ್ದು ಸವದಿ ಭೇಟಿ ನೀಡಿ, ವೀಕ್ಷಿಸಿದರು. ಮಹದೇವ ದೂಪದಾಳ, ಶ್ರೀಶೈಲ ಬೀಳಗಿ, ರಿಜ್ವಾನ್ ಅಹ್ಮದ್, ವೇಣುಗೋಪಾಲ, ಬಾಬಾಗೌಡ ಪಾಟೀಲ, ಸಂಜಯ ತೆಗ್ಗಿ, ಸುರೇಶ ಅಕ್ಕಿವಾಟ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತೇರದಾಳ ಶಾಸಕ ಸಿದ್ದು ಸವದಿ ಟೀಕೆ
  • ಕಾಂಗ್ರೆಸ್ ಅವಧಿಯಲ್ಲಿ ಕ್ಷೇತ್ರದ ಅಭಿವದ್ಧಿ ಶೂನ್ಯ
ರಬಕವಿ/ಬನಹಟ್ಟಿ: ಮಹಿಷವಾಡಗಿ ಸೇತುವೆ ಕಾಮಗಾರಿಗೆ ರಾಜಕೀಯ ಬಣ್ಣ ನೀಡಲಾಗುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ತೇರದಾಳ ಶಾಸಕ ಸಿದ್ದು ಸವದಿ, ಸರ್ಕಾರದ ಯೋಜನೆಗಳು ಜನಪ್ರತಿನಿಧಿಗಳ ಮೂಲಕವೇ ನಡೆಯುತ್ತವೆ. ಆದರೆ ನಾನೇ ಮಾಡಿಸಿದ್ದೇನೆ ಎಂದು ಹೇಳುತ್ತ ಶೋ ಮ್ಯಾನ್ ಆಗಿ ಮಧ್ಯಪ್ರವೇಶಿಸುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಸಮೀಪದ ಕಷ್ಣಾ ನದಿ ತೀರದಲ್ಲಿರುವ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದ ಅವರು, 2017ರಲ್ಲಿ ಶಂಕುಸ್ಥಾಪನೆಗೊಂಡ ಈ ಸೇತುವೆ ಕಾಮಗಾರಿ ಪ್ರಸ್ತುತ ಸುಮಾರು 55 ಕೋಟಿ ರೂ. ವೆಚ್ಚದಲ್ಲಿ ಸಾಗುತ್ತಿದೆ ಎಂದರು. ತಮ್ಮ ಅವಧಿಯಲ್ಲಿ ಹೆಚ್ಚುವರಿ ಅನುದಾನ ತಂದು ಯೋಜನೆಗೆ ವೇಗ ನೀಡಲಾಗಿದೆ ಎಂದು
ತಿಳಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಕ್ಷೇತ್ರದ ಅಭಿವದ್ಧಿ ಶೂನ್ಯವಾಗಿದ್ದು, ಈಗ ತಪ್ಪು ಮಾಹಿತಿ ನೀಡಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿರುವವರನ್ನು ಮತದಾರರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವರು ಎಂದು ಸವದಿ ಹೇಳಿದರು.
ರಾಜ್ಯ ರಸ್ತೆ ಅಭಿವದ್ಧಿ ನಿಗಮದ ಕಾರ್ಯನಿರ್ವಾಹಕ ರಿಜ್ವಾನ್ ಅಹ್ಮದ್, ನಾಗಾರ್ಜುನ ಕಂಪನಿ ಗುತ್ತಿಗೆದಾರ ಯೋಜನಾಧಿಕಾರಿ ವೇಣುಗೋಪಾಲ, ಬಾಬಾಗೌಡ ಪಾಟೀಲ, ಸಂಜಯ ತೆಗ್ಗಿ, ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಮಹಾದೇವ ಧೂಪದಾಳ, ಶ್ರೀಶೈಲ ಬೀಳಗಿ, ಪರಪ್ಪ ಪೂಜಾರಿ, ಈಶ್ವರ ನಾಗರಾಳ, ಈಶ್ವರ ಕಾಡದೇವರ, ಅಶೋಕ ರಾವಳ, ಯಲ್ಲಪ್ಪ ಕಟಗಿ ಸೇರಿ ಅನೇಕರಿದ್ದರು.
ವಾರದೊಳಗೆ ಪಿಲ್ಲರ್ ಕೆಲಸ ಪೂರ್ಣ: ಕಷ್ಣಾ ನದಿಯೊಳಗಿನ 7 ಮತ್ತು 8ನೇ ಪಿಲ್ಲರ್ ಕಾಮಗಾರಿ ವಾರದೊಳಗೆ ಮುಕ್ತಾಯಗೊಳ್ಳಲಿದ್ದು, ಸಂಪೂರ್ಣ ಸೇತುವೆ ನಿರ್ಮಾಣ ಮುಂದಿನ ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಮಾಹಿತಿ ನೀಡಿದರು.
"

ಕೆಲಸಕ್ಕೆ ಅಡ್ಡಿಯಾಗಬೇಡಿ

ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವವರು ಕೆಲಸಗಾರರಿಗೆ ಸಹಕರಿಸಬೇಕು, ಅನಾವಶ್ಯಕ ಹಸ್ತಕ್ಷೇಪ ಮಾಡಬಾರದು ಎಂದು ಶಾಸಕರು ಸೂಚಿಸಿದರು. ಅಧಿಕಾರಿಗಳಿಗೆ ಸರ್ಕಾರದ ನಿಯಮ ಪಾಲನೆ ಮಾಡುವಂತೆ ನಿರ್ದೇಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net