ಜುಲೈ 15ರ ಮಧ್ಯಾಹ್ನ 4.50ಕ್ಕೆ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಪಿ.ಎಸ್.ಗಾಯತ್ರಿದೇವಿ ಸಲ್ಲಿಸಿರುವ ದೂರಿನಂತೆ ಬಾಲಕಿ ನಗರದ ಎಸ್ವಿಟಿ ಮಿಲ್ ರಸ್ತೆ, ಇಡ್ಲಿಪಾಳ್ಯದ ವಾಸಿ ಲೇಟ್ ಬಾಬು ಅವರ ಮಗಳಾಗಿದ್ದು, ಕೆಲ ದಿನಗಳ ಹಿಂದೆ ಚಿಂತಾಮಣಿಯಿಂದ ಕಾಣೆಯಾಗಿದ್ದಳು. ಬಳಿಕ ಕೋಲಾರ ಜಿಲ್ಲೆಯ ಕೆಜಿಎಫ್ನ ಆಂಡರ್ಸನ್ಪೇಟೆ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಳು. ಹೀಗಾಗಿ ಬಾಲಕಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ಸಮಿತಿ ಆದೇಶದಂತೆ ಚಿಕ್ಕಬಳ್ಳಾಪುರದ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ.