ಓದುಗರ ಸಂಭ್ರಮ ಹೆಚ್ಚಿಸಿದ ಕವಿ ಬಿ.ಆರ್.ಲಕ್ಷ್ಮಣರಾವ್; ಟಿ.ಎನ್.ಸೀತಾರಾಮ್ ಬಣ್ಣನೆ

ಬಿಆರ್‌ಎಲ್ 80 ಅಭಿನಂದನಾ ಸಮಾರಂಭದಲ್ಲಿ ಬಿ.ಆರ್.ಲಕ್ಷ್ಮಣರಾವ್ ದಂಪತಿಗಳನ್ನು ಸನ್ಮಾನಿಸಲಾಯಿತು. ಟಿ.ಎನ್.ಸೀತಾರಾಮ್, ಎಚ್.ಡುಂಡಿರಾಜ್, ಶ್ರೀನಿವಾಸ್ ಪ್ರಭು, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಬಿಆರ್‌ಎಲ್ 80 ಅಭಿನಂದನಾ ಸಮಾರಂಭದಲ್ಲಿ ಬಿ.ಆರ್.ಲಕ್ಷ್ಮಣರಾವ್ ದಂಪತಿಗಳನ್ನು ಸನ್ಮಾನಿಸಲಾಯಿತು. ಟಿ.ಎನ್.ಸೀತಾರಾಮ್, ಎಚ್.ಡುಂಡಿರಾಜ್, ಶ್ರೀನಿವಾಸ್ ಪ್ರಭು, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಓದುಗರ ಸಂಭ್ರಮ ಹೆಚ್ಚಿಸಿದ ಕವಿ ಬಿ.ಆರ್.ಲಕ್ಷ್ಮಣರಾವ್
  • ಹಿರಿಯ ನಿರ್ದೇಶಕ ಟಿ.ಎನ್.ಸೀತಾರಾಮ್ ಬಣ್ಣನೆ
  • ಬಿ.ಆರ್‌.ಲಕ್ಷ್ಮಣರಾವ್-80ನೇ ಜನ್ಮದಿನ ಅಭಿನಂದನೆ

ಬೆಂಗಳೂರು: ಸಾಹಿತ್ಯರಚನೆಯಲ್ಲಿ ತೊಡಗಿದ ವ್ಯಕ್ತಿಗೆಓದುಗರ ಮನಸ್ಸನ್ನು ಪ್ರಪುಲ್ಲಗೊಳಿಸಬೇಕಾದಜವಾಬ್ದಾರಿ ಇರುತ್ತದೆ.ಆ ನಿಟ್ಟಿನಲ್ಲಿಓದುಗರ ಸಡಗರ ಮತ್ತು ಸಂಭ್ರಮವನ್ನುಹೆಚ್ಚಿಸಿದ ಕವಿ ಬಿ.ಆರ್.ಲಕ್ಷ್ಮಣರಾವ್ಎಂದು ಹಿರಿಯ ನಿರ್ದೇಶಕ ಟಿ.ಎನ್.ಸೀತಾರಾಮ್ಹೇಳಿದರು.

ಎನ್.ಆರ್.ಕಾಲೋನಿಯಪತ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಪ್ರೇಮಕವಿ ಬಿ.ಆರ್.ಲಕ್ಷ್ಮಣರಾವ್ಅವರ 80ನೇಜನ್ಮದಿನದ ಅಭಿನಂದನಾ ಸಮಾರಂಭದಲ್ಲಿಪಾಲ್ಗೊಂಡು ಮಾತನಾಡಿದರು.

ಲಕ್ಷ್ಮಣರಾವ್ಅವರ ಕಾವ್ಯದ ವೈಶಿಷ್ಟ್ಯವನ್ನುವಿವರಿಸಿದ ಅವರು,ನಾವು ಯಾವುದನ್ನಾದರೂಪ್ರೀತಿಯಿಂದ ನೋಡಿದಾಗ,ಸುತ್ತಲಿನವಾತಾವರಣವೂ ಸುಂದರವಾಗಿ ಕಾಣುತ್ತದೆ.ಹೃದಯ ಸಂತೋಷದಿಂದತುಂಬಿದಾಗ,ಪೂಜಾರಿಯ ಗಂಟೆಯಧ್ವನಿಯಲ್ಲೂ ಕೋಗಿಲೆಯ ಸ್ವರಕೇಳಿಸುತ್ತದೆ.ಅಂತಹ ಸಂತೋಷವನ್ನುಲಕ್ಷ್ಮಣರಾವ್ ತಮ್ಮ ಕಾವ್ಯದಮೂಲಕ ಕಟ್ಟಿಕೊಟ್ಟಿದ್ದಾರೆ.ಸಾಮಾನ್ಯ ಬದುಕಿನಸಣ್ಣ ಸಣ್ಣ ಅನುಭವಗಳನ್ನೇಕಾವ್ಯವಾಗಿಸುವ ಪ್ರತಿಭೆಲಕ್ಷ್ಮಣರಾವ್ ಅವರಲ್ಲಿ ವಿದ್ಯಾರ್ಥಿದೆಸೆಯಿಂದಲೇ ಇತ್ತು.ಅವರ ಕವಿತೆ,ಹಾಡು ಮತ್ತುಮಾತುಗಳಲ್ಲಿ ಬದುಕಿನ ಸಂತೋಷ,ಸ್ನೇಹ ಹಾಗೂಸೌಂದರ್ಯ ಕಾಣಿಸುತ್ತಿತ್ತು.ಇತ್ತೀಚೆಗೆಬದುಕು ಕೃತ್ರಿಮ ಪ್ಯಾಕೇಜ್‌ನಂತಾಗಿದ್ದು,ಕೃತ್ರಿಮತೆಇಲ್ಲದ ಸ್ನೇಹಜೀವಿ ಲಕ್ಷ್ಮಣರಾವ್.ಎಲ್ಲರೂ ಒಂದಲ್ಲಒಂದು ರೀತಿಯಲ್ಲಿ ಶಾಕ್ ಕೊಡುತ್ತಾರೆ.ಆದರೆ ಲಕ್ಷ್ಮಣ್‌ರಾವ್ಬೆಳಕಿನ ಶಾಕ್ ನೀಡಿದ್ದಾರೆ.ಆ ಬೆಳಕಿನಲ್ಲಿಹಲವು ಹಿರಿಯರ ನೆನಪುಗಳು,ಕೃತಿಗಳು ಕಣ್ಣಮುಂದೆಬರುತ್ತವೆ ಎಂದು ಸೀತಾರಾಮ್ವಿವರಿಸಿದರು.

80ನೇಜನ್ಮದಿನೋತ್ಸವದ ಸವಿನೆನಪಿಗಾಗಿ‘ಸಾವೇ ಬೀಗಬೇಡ’ ‘ಓಶೋ ರಜನೀಶ್ನಿಜರೂಪ’ ಎಂಬ ಎರಡು ಕೃತಿಗಳನ್ನುಬಿಡುಗಡೆ ಮಾಡಲಾಯಿತು.ಕೃತಿಯ ಕುರಿತುಮಾತನಾಡಿದ ಹನಿಗವಿ ಎಚ್.ಡುಂಡಿರಾಜ್ಅನುವಾದ ಸಾಹಿತ್ಯದಲ್ಲೂ ಸ್ವಂತಿಕೆಯನ್ನುಬಿಡದ ಹೆಗ್ಗಳಿಕೆ ಲಕ್ಷ್ಮಣರಾವ್ಬರಹದಲ್ಲಿ ಕಾಣಬಹುದು ಎಂದರು.

ಬೇರೆಮಧುವೇಕೆ ನನಗೆ’ ಎಂಬ ಗಜಲ್ಗುಚ್ಛವನ್ನು ಬಿಡುಗಡೆ ಮಾಡಿಮಾತನಾಡಿದ ಹಿರಿಯ ನಟ ಶ್ರೀನಿವಾಸಪ್ರಭು, ಅರೇಬಿಕ್ಮೂಲದಿಂದ ಬಂದ ಗಜಲ್ ಸಂಸ್ಕೃತಿಯನ್ನುಕನ್ನಡದ ಜಾಯಮಾನಕ್ಕೆ ಒಗ್ಗಿಸಿದಕವಿ ಬಿ.ಆರ್.ಲಕ್ಷ್ಮಣರಾವ್ಎಂದು ಹೇಳಿದರು.ಕಾರ್ಯಕ್ರಮದಕೊನೆಯಲ್ಲಿ ಗಜಲ್‌ಗಳನ್ನುಹಾಡಲಾಯಿತು.ಕಾರ್ಯಕ್ರಮದಮೊದಲಿಗೆ ಬಿ.ಆರ್.ಲಕ್ಷ್ಮಣರಾವ್ಕುರಿತು ಸಾಕ್ಷ್ಯಚಿತ್ರಪ್ರದರ್ಶಿಸಲಾಯಿತು.

ಸಮಾರಂಭದಲ್ಲಿಸುಗಮ ಸಂಗೀತ ಪರಿಷತ್ ಅಧ್ಯಕ್ಷವೈ.ಕೆ.ಮುದ್ದುಕೃಷ್ಣ,ಹಿರಿಯ ಸಾಹಿತಿಡಾ.ನರಹಳ್ಳಿಬಾಲಸುಬ್ರಹ್ಮಣ್ಯ,ಉದ್ಯಮಿ ರಾಜಶೇಖರ್ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಬಿಆರ್‌ಎಲ್80 ಅಭಿನಂದನಾಸಮಾರಂಭದಲ್ಲಿ ಕಾರ್ಯಕ್ರಮದಲ್ಲಿಬಿ.ಆರ್.ಲಕ್ಷ್ಮಣರಾವ್ಅವರ ಎರಡು ಕೃತಿಗಳನ್ನು ಬಿಡುಗಡೆಮಾಡಲಾಯಿತು.ಟಿ.ಎನ್.ಸೀತಾರಾಮ್,ಎಚ್.ಡುಂಡಿರಾಜ್,ಶ್ರೀನಿವಾಸ್ಪ್ರಭು, ರಾಜಶೇಖರ್ಮತ್ತಿತರರು ಉಪಸ್ಥಿತರಿದ್ದರು.

ಅದೃಷ್ಟ ಎಂಬುದು ನನ್ನ ಜೀವನದಲ್ಲಿ ಬಹಳ ದೊಡ್ಡ ಪಾತ್ರವಹಿಸಿದೆ. ಇಂದು ನನಗೆ ಸಲ್ಲಿಸಿದ ಅಭಿನಂದನೆಯು ಕನ್ನಡ ಭಾಷೆಗೆ, ಕನ್ನಡ ಸಾರಸ್ವತ ಲೋಕಕ್ಕೆ ಸಿಕ್ಕ ಗೌರವವಾಗಿದೆ. ನಾನು ಕೇವಲ ಕನ್ನಡ ಸಾರಸ್ವತ ಲೋಕದ ಪ್ರತಿನಿಧಿಯಾಗಿ ನಿಮ್ಮ ಅಭಿನಂದನೆಗಳನ್ನು ಸ್ವೀಕರಿಸಿದ್ದೇನೆ.

— ಬಿ.ಆರ್.ಲಕ್ಷ್ಮಣರಾವ್, ಹಿರಿಯ ಕವಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net