ಗೋ ಸಮ್ಮಾನ್ ಅಭಿಯಾನ ತಾಲೂಕು ಮುಖ್ಯಸ್ಥ ಪಿ.ಎಂ. ರಘುನಾಥ್ ಮಾತನಾಡಿ, ಭಾರತೀಯ ಸಂಸತಿ, ಪರಂಪರೆ, ಆರ್ಥಿಕತೆ, ಮಾನಸಿಕ ಆರೋಗ್ಯ, ವಿಷಮುಕ್ತ ಕೃಷಿ ಮತ್ತು ಪರಿಸರ ಸಮತೋಲನದಲ್ಲಿ ದೇಸಿ ಹಸುವಿನ ಸ್ಥಾನ ಅತ್ಯಂತ ಮಹತ್ವದ್ದು. ಹಾಗಾಗಿ ದೇಸಿ ಗೋವುಗಳನ್ನು ಕಟುಕರಿಂದ ರಕ್ಷಣೆ ಮಾಡುವ ಕೆಲಸವಾಗಬೇಕು. ಸರ್ಕಾರ ಮತ್ತು ಜಿಲ್ಲಾ, ತಾಲೂಕು ಆಡಳಿತಗಳು ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.