ಗುರುಮಠಕಲ್ ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರಿಗೆ ನೂತನ ಲ್ಯಾಪ್ಟಾಪ್ನ್ನು ಶಾಸಕ ಶರಣಗೌಡ ಕಂದಕೂರ ವಿತರಿಸಿದರು. ತಹಸೀಲ್ದಾರ್ ಚನ್ನಮಲ್ಲಪ್ಪ ಂಟಿ, ಗ್ರೇಡ್&2 ತಹಸೀಲ್ದಾರ್ ನರಸಿಂಹ ಸ್ವಾಮಿ, ಬಸವರಾಜ ಸಜ್ಜನ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಸಕ ಶರಣಗೌಡ ಕಂದಕೂರ ಸೂಚನೆ
ಅಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಣೆ
ಗುರುಮಠಕಲ್: ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಗ್ರಾಮೀಣ ಜನರ ಸಮಸ್ಯೆಗೆ ಶ್ರೀ ಸ್ಪಂದಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಲ್ಯಾಪ್ಟಾಪ್ ವಿತರಿಸಿ ಮಾತಾಡಿದ ಅವರು, ತಾಲೂಕಿನ ಆಡಳಿತ ವ್ಯವಸ್ಥೆಗೆ ಡಿಜಿಟಲ್ ವೇಗ ನೀಡುವ ನಿಟ್ಟಿನಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರಿಗೆ ನೂತನ ಲ್ಯಾಪ್ಟಾಪ್ ವಿತರಿಸಲಾಗುತ್ತಿದ್ದು, ಹೀಗಾಗಿ ಜನರ ಸಮಸ್ಯೆಗೆ ಆದಷ್ಟು ಬೇಗ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.
ತಂತ್ರಜ್ಞಾನ ಬಳಕೆಯ ಮೂಲಕ ಗ್ರಾಮ ಮಟ್ಟದಲ್ಲೇ ಸೇವೆಗಳನ್ನು ಪ್ರವಾಗಿ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಹೀಗಾಗಿ ಲ್ಯಾಪ್ಟಾಪ್ಗಳ ನೆರವಿನಿಂದ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿ ವಿವಿಧ ಕಂದಾಯ ದಾಖಲೆಗಳ ವಿಲೇವಾರಿ ವೇಗವಾಗಿ ನಡೆಯಲಿದೆ. ಅಧಿಕಾರಿಗಳು ಕಚೇರಿಗಳ ಸುತ್ತಾಟವಿಲ್ಲದೆ ಸ್ಥಳದಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವಂತಾಗಬೇಕು ಹೇಳಿದರು.
ಸಣ್ಣಪುಟ್ಟ ಕೆಲಸಗಳಿಗಾಗಿ ದಿನಗಟ್ಟಲೇ ಕಾಯಬೇಕಾಗುವ ಸಾರ್ವಜನಿಕರ ಸಮಸ್ಯೆಗಳನ್ನು ಈ ಆಧುನಿಕ ಉಪಕರಣಗಳು ಕಡಿಮೆ ಮಾಡಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಗ್ರಾಮ ಮಟ್ಟದಲ್ಲಿ ಡಿಜಿಟಲೀಕರಣ ಬಲಪಡಿಸುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ವೇಗ ಎರಡನ್ನೂ ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದರು.
ಈ ವೇಳೆ ತಹಸೀಲ್ದಾರ್ ಚನ್ನಮಲ್ಲಪ್ಪ ಂಟಿ, ಗ್ರೇಡ್&2 ತಹಸೀಲ್ದಾರ್ ನರಸಿಂಹ ಸ್ವಾಮಿ, ಬಸವರಾಜ ಸಜ್ಜನ್, ಕಂದಾಯ ನಿರೀಕ್ಷಕರಾದ ದೊಡ್ಡ ಬಸವರಾಜ, ಭೀಮಶೇನ್ ಪಾಟೀಲ್ ಇತರರಿದ್ದರು.