ಹಕ್ಕು ಪಡೆಯಲು ಸಹಕಾರ ನೀಡಿ right

ಹಕ್ಕು ಪಡೆಯಲು ಸಹಕಾರ ನೀಡಿ right
ಹಕ್ಕು ಪಡೆಯಲು ಸಹಕಾರ ನೀಡಿ right
Published on
ಮುಳಬಾಗಿಲು: ಹಳೆಯ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾ.24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದೆ. ಕೋಲಾರ ಜಿಲ್ಲೆಯಿಂದ 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಬೇಕು ಎಂದು ಭೋವಿ ಸಮುದಾಯದ ಕೋಲಾರ ಜಿಲ್ಲಾಧ್ಯಕ್ಷ ಸಿ.ವಿ.ಗೋಪಾಲ್​ ತಿಳಿಸಿದರು.right
ನಗರದ ವಾಸುದೇವರೆಡ್ಡಿ ಲೇಔಟ್​ನಲ್ಲಿರುವ ಭೋವಿ ಸಮುದಾಯ ಭವನದಲ್ಲಿ ಭಾನುವಾರ ಸಮಾಜದ ಮುಖಂಡರುಗಳೊಂದಿಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಭೋವಿ, ಬಂಜಾರ, ಕೊರಮ, ಕೊರಚ, ಲಂಬಾಣಿ ಇತರೆ 65ಕ್ಕೂ ಹೆಚ್ಚು ಸೂಕ್ಷ$್ಮ ಜಾತಿಗಳ ಸಮುದಾಯವನ್ನು ನಾಗಮೋಹನ್​ ದಾಸ್​ ಅಯೋಗ ಗ್ರೂಪ್​ ಸಿ ಗೆ ಸೇರಿಸುವ ಮೂಲಕ ಯಾವುದೇ ಉನ್ನತ ಹುದ್ದೆಗಳು ಈ ಜಾತಿಗಳಿಗೆ ಸಿಗದಂತೆ ರೋಸ್ಟರ್​ ಬಿಂದು ನಿಗದಿಪಡಿಸಿ ಅನ್ಯಾಯ ಮಾಡಿದೆ ಎಂದು ತಿಳಿಸಿದರು.
ಒಳ ಮೀಸಲಾತಿ ಅಳವಡಿಸುವ ಬಗ್ಗೆ ಮಾ.27ರಂದು ರಾಜ್ಯ ಸಂಪುಟದ ವಿಶೇಷ ಸಭೆ ನಡೆಯಲಿದ್ದು, ಸರ್ಕಾರದ ಗಮನ ಸೆಳೆಯಲು ಹಾಗೂ ಹಳೇ ಮೀಸಲಾತಿ ಜಾರಿಗೆಗೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೀಲು ಹೊಳಲಿ ಚಂಗಲರಾಯಪ್ಪ, ಹರಪನಾಯಕನಹಳ್ಳಿ ವೆಂಕಟೇಶ್​, ನಗರಸಭಾ ಮಾಜಿ ಉಪಾಧ್ಯಕ್ಷ ಜಿ.ನಾಗರಾಜ್​, ಸಿದ್ದನಹಳ್ಳಿ ರಾಮಾಂಜಿ, ಕೆಂಪಾಪುರ ರಮೇಶ್​, ಕೆಸರಮಂಗಲ ತಿಮ್ಮಯ್ಯ, ಚಿಕ್ಕಗೊಲ್ಲಹಳ್ಳಿ ಯಲ್ಲಪ್ಪ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net