ವಿಷಕಾರಿ ಚೇಳುಗಳೊಂದಿಗೆ ಚೆಲ್ಲಾಟ

ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಬೆಟ್ಟದಲ್ಲಿ ಸೋಮವಾರ ನಾಗರಪಂಚಮಿ ನಿಮಿತ್ತ ನಡೆದ ಕೊಂಡಮ್ಮಾಯಿ ಜಾತ್ರೆಯಲ್ಲಿ ಜೀವಂತ ಚೇಳುಗಳನ್ನು ಹಿಡಿದು ಖುಷಿಪಟ್ಟ ಭಕ್ತರು.
ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಬೆಟ್ಟದಲ್ಲಿ ಸೋಮವಾರ ನಾಗರಪಂಚಮಿ ನಿಮಿತ್ತ ನಡೆದ ಕೊಂಡಮ್ಮಾಯಿ ಜಾತ್ರೆಯಲ್ಲಿ ಜೀವಂತ ಚೇಳುಗಳನ್ನು ಹಿಡಿದು ಖುಷಿಪಟ್ಟ ಭಕ್ತರು.
Published on

ಪ್ರಮುಖ ಮುಖ್ಯಾಂಶಗಳು

  • ಕಂದಕೂರ ಕೊಂಡಮ್ಮಾಯಿ ಬೆಟ್ಟದಲ್ಲಿ ಜಾತ್ರೆ ಸಂಭ್ರಮ
  • ಪರಸ್ಪರ ಮೈಮೇಲೆ ಎರಚಿಕೊಂಡು ಖುಷಿ
ಗುರುಮಠಕಲ್: 

ನಾಗರಪಂಚಮಿ ನಿಮಿತ್ತ ಎಲ್ಲೆಡೆ ನಾಗದೇವರಿಗೆ ಹಾಲೆರೆದು ಪೂಜಿಸಿದರೆ, ಕಂದಕೂರ ಗ್ರಾಮದ ಕೊಂಡಮ್ಮಾಯಿ ಬೆಟ್ಟದ (ದೇವಿ ಜಾತ್ರೆ)ಲ್ಲಿ ಚಿಣ್ಣರಿಂದ ಹಿರಿಯರವರೆಗೆ ವಿಷಕಾರಿ ಚೇಳುಗಳನ್ನು ಹಿಡಿದು ಅವುಗಳೊಂದಿಗೆ ಆಟವಾಡುವ ಮೂಲಕ ಭಕ್ತಿಯ ಪರಾಕಾಷ್ಟೆ ಮೆರೆದಿದ್ದು ಸೋಮವಾರ ಕಂಡುಬAದಿತು.

ಬೆಟ್ಟದಲ್ಲಿರುವ ಕಲ್ಲುಗಳನ್ನು ಸರಿಸಿದಂತೆ ಕಾಣುವ ಚೇಳುಗಳನ್ನು ಹಿಡಿದು ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಾಗರಪಂಚಮಿ ಹಬ್ಬದ ದಿನ ಮಾತ್ರ ಚೇಳುಗಳು ಕಾಣಿಸುವುದು ಮತ್ತು ಕಚ್ಚದಿರುವುದು ಹಾಗೂ ಕೊಂಡಮ್ಮ ದೇವಿ ಪಕ್ಕದಲ್ಲಿರುವ ಚೇಳು ಮೂರ್ತಿಗೆ ಹಾಲೆರೆಯುವುದು ಇಲ್ಲಿನ ವೈಶಿಷ್ಟ್ಯ. ಪ್ರತಿವರ್ಷ ರಾಜ್ಯ ಸೇರಿ ನೆರೆಯ ತೆಲಂಗಾಣ, ಆಂಧ್ರಪ್ರದೇಶದಿಂದ ಆಗಮಿಸುವ ನೂರಾರು ಜನರು ಚೇಳು ಹಿಡಿದು ಮೈಮೇಲೆ, ನಾಲಿಗೆ ಹಾಗೂ ತಲೆ ಮೇಲೆ ಹಾಕಿಕೊಂಡು ಸಂಭ್ರಮಿಸುತ್ತಾರೆ.
ಸಾವಿರಾರು ಭಕ್ತರು ಚೇಳು (ಕೊಂಡಮ್ಮಾಯಿ) ಜಾತ್ರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕರ್ತವ್ಯದೊಂದಿಗೆ ಪೊಲೀಸರು ಸಹ ಚೇಳು ಹಿಡಿದು ಖುಷಿಪಟ್ಟರು.
"

ನಾಗರಪಂಚಮಿಯನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. ಕೊಂಡಮ್ಮಾಯಿ ಬೆಟ್ಟಕ್ಕೆ ರಾಜ್ಯವಲ್ಲದೆ ನೆರೆ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಇಂದು ಚೇಳು ಕಚ್ಚುವುದಿಲ್ಲ. ಅಂತಲೇ ಭಕ್ತಿಭಾವದಿಂದ ಜನರು ಚೇಳು ಹಿಡಿದು ಜÁತ್ರೆಯಲ್ಲಿ ಖುಷಿಪಡುತ್ತಾರೆ.| ಡಾ.ಸಿದ್ಧಲಿಂಗರೆಡ್ಡಿ ಪಾಟೀಲ್ಕಂದಕೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net