ಸಂಘದ ಮಾಜಿ ಅಧ್ಯಕ್ಷ ಎಂ.ಆರ್.ಅನಿಲ್‌ಕುಮಾರ್ ಮಾತನಾಡಿದರು. ಹಿರಿಯ ಸಹಕಾರಿಗಳಾದ ಬಿ.ಎಚ್.ಶಿವಣ್ಣ, ವಿ.ಎನ್.ರಾಜಣ್ಣ ಹಾಗೂ ಟಿಎಪಿಸಿಎಂಎಸ್‌ನಿಂದ ಅತಿ ಹೆಚ್ಚು ಗೊಬ್ಬರ ಖರೀದಿಸಿದ ಮೂವರು ರೈತರನ್ನು ಇದೇ ಸಂದರ್ಭ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಆರ್.ವೆಂಕಟೇಶ್‌ಮೂರ್ತಿ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷೆ ತಾರಮಣಿ ಆನಂದ್, ನಿರ್ದೇಶಕರಾದ ಕುಂಬಾರಹಳ್ಳಿ ರಮೇಶ್, ತರಬೇನಹಳ್ಳಿ ನಂಜುಂಡೇಗೌಡ, ಎಂ.ಎನ್.ಬೋರೆಗೌಡ, ಮಮತಾ ಜಯಣ್ಣ, ಸಿ.ಜಿ.ಜಗದೀಶ್, ತೋಟಿ ನಾಗಣ್ಣ, ನೆಟ್ಟೆಕೆರೆ ನಾಗರಾಜು, ರವಿಕುಮಾರ್ ಕುಂಬಾರಹಳ್ಳಿ, ಉಮೇಶ್ ಇತರರಿದ್ದರು.