ಪಿಜಿ ನೀಟ್: ಹಂಚಿಕೆಯಾದ ಸೀಟು ಪಡೆದಿದ್ದರೆ 18 ಲಕ್ಷ ರೂ. ದಂಡ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Published on

ಪ್ರಮುಖ ಮುಖ್ಯಾಂಶಗಳು

  • ಮೂರನೇ ಸುತ್ತಿನ ಮಾಪ್ ಅಪ್‌ನಲ್ಲಿ ಸೀಟು ಪಡೆದು 4ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗುವುದರೊಳಗೆ ಸೀಟು ಪಡೆಯದಿದ್ದರೆ 18 ಲಕ್ಷ ರೂ. ದಂಡ
  • ಜತೆಗೆ ಮುಂದಿನ ಮೂರು ವರ್ಷಗಳ ಕಾಲ ಪಿಜಿ ವೈದ್ಯಕೀಯ ಕೋರ್ಸ್ ಪ್ರವೇಶ ಪ್ರಕ್ರಿಯೆಯಿಂದ ರದ್ದು
  • ಅರ್ಹರಿಗೆ ಸೀಟು ದೊರೆಯಬೇಕೆಂಬ ಉದ್ದೇಶದಿಂದ ಈ ನಿಯಮ ಪ್ರಕಟಿಸಲಾಗಿದೆ ಎಂದ ಕೆಇಎ
ಬೆಂಗಳೂರು: ವೈದ್ಯಕೀಯ ಸ್ನಾತಕೋತ್ತರ (ಪಿಜಿ ನೀಟ್) ಕೋರ್ಸ್ ಮೊದಲನೆ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಿದೆ. ಹಂಚಿಕೆಯಾಗಿ ಒಂದು ವೇಳೆ ಸೀಟು ಪಡೆದಿದ್ದರೆ ಭಾರೀ ದಂಡ ತೆತ್ತಬೇಕಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಮೂರನೇ ಸುತ್ತಿನ ಮಾಪ್ ಅಪ್‌ನಲ್ಲಿ ಸೀಟು ಪಡೆದು 4ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗುವುದರೊಳಗೆ ಸೀಟು ಪಡೆಯದಿದ್ದರೆ 18 ಲಕ್ಷ ರೂ. ದಂಡ ಮತ್ತು ಕೋರ್ಸ್ ಒಂದು ವರ್ಷದ ಶುಲ್ಕದ ಮೊತ್ತವನ್ನು ಪಾವತ್ತಿಸುವ ಜತೆಗೆ ಮುಂದಿನ ಮೂರು ವರ್ಷಗಳ ಕಾಲ ಪಿಜಿ ವೈದ್ಯಕೀಯ ಕೋರ್ಸ್ ಪ್ರವೇಶ ಪ್ರಕ್ರಿಯೆಯಿಂದ ರದ್ದುಗೊಳಿಸಲಾಗುತ್ತದೆ ಎಂಬ ಎಚ್ಚರಿಕೆ ನೀಡಿದೆ.
ಅದೇ ರೀತಿ ಡಿಪ್ಲೊಮಾ ಕೋರ್ಸ್‌ಗೆ 6 ಲಕ್ಷ ರೂ., ಪ್ರಿ ಕ್ಲಿನಿಕಲ್‌ಗೆ ಒಂದು ಲಕ್ಷ ರೂ., ಪ್ಯಾರಾ ಕ್ಲಿನಿಕಲ್ ಕೋರ್ಸ್‌ಗೆ 2 ಲಕ್ಷ ರೂ., ಪ್ಯಾರಾ ಕ್ಲಿನಿಕಲ್ ಡಿಪ್ಲೊಮಾಗೆ 75 ಸಾವಿರ ರೂ.ಗಳ ದಂಡ ವಿಧಿಸಲಾಗುತ್ತಿದೆ.
ಇದೇ ರೀತಿ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಸೀಟು ಪಡೆದು ಸಂಬಂಧಪಟ್ಟ ಕಾಲೇಜಿನಲ್ಲಿ ದಾಖಲಾಗದಿದ್ದರೆ 25 ಸಾವಿರ ರೂ. ದಂಡ, ಕಾಲೇಜಿನಲ್ಲಿ ದಾಖಲಾಗಲು ಕೊನೇ ದಿನದೊಳಗೆ ಸೀಟು ರದ್ದುಪಡಿಸದಿದ್ದರೆ 1.5 ಲಕ್ಷ ರೂ., ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಮೂರನೇ ಸುತ್ತಿನ ಪ್ರಕ್ರಿಯೆಯೊಳಗೆ ಸೀಟು ಹಿಂದಿರುಗಿಸದಿದ್ದರೆ 7 ಲಕ್ಷ ರೂ.ಗಳ ದಂಡ ಪಾವತಿಸಬೇಕು ಎಂಬ ಎಚ್ಚರಿಕೆ ನೀಡಿದೆ.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಾದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ ನಿಯಮಗಳ ಪ್ರಕಾರ ಪ್ರವೇಶಾ ಪರೀಕ್ಷೆಯಲ್ಲಿ ಅರ್ಹರಿಗೆ ಸೀಟು ಹಂಚಿಕೆ ಮಾಡಲಾಗುತ್ತಿದೆ. ಅರ್ಹರಿಗೆ ಸೀಟು ದೊರೆಯಬೇಕೆಂಬ ಉದ್ದೇಶದಿಂದ ಈ ನಿಯಮಗಳನ್ನು ಪ್ರಕಟಿಸಲಾಗಿದೆ ಎಂದು ಕೆಇಎ ಸ್ಪಷ್ಟಪಡಿಸಿದೆ.
"
ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net