ಗುಣ, ನಡತೆಯಿಂದ ವ್ಯಕ್ತಿತ್ವ ವಿಕಸನ Personality development

ಗುಣ, ನಡತೆಯಿಂದ ವ್ಯಕ್ತಿತ್ವ ವಿಕಸನ Personality development
ಗುಣ, ನಡತೆಯಿಂದ ವ್ಯಕ್ತಿತ್ವ ವಿಕಸನ Personality development
Published on
ಬೇತಮಂಗಲ: ಯಾವುದೇ ಒಬ್ಬ ವ್ಯಕ್ತಿ ಅಥವಾ ವಿದ್ಯಾರ್ಥಿ ತನ್ನ ೇತ್ರದಲ್ಲಿ ಸಾಧನೆ ಮಾಡಬೇಕಾದರೆ ಸತತ ಪರಿಶ್ರಮದ ಜತೆಗೆ ಆತನ ಗುಣ, ನಡತೆ ವ್ಯಕ್ತಿತ್ವ ವಿಕಸನ ಪ್ರಮುಖ ಭಾಗವಾಗುತ್ತದೆ ಎಂದು ಬೇತಮಂಗಲ ಪೊಲೀಸ್​ ವೃತ್ತ ನಿರೀಕ ರಂಗಸ್ವಾಮಯ್ಯ ಅಭಿಪ್ರಾಯಪಟ್ಟರು.Personality development
ಪಟ್ಟಣ ಹೊರವಲಯದ ಶ್ರೀಸಾಯಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ಮದನ್​ ಬಗ್ಗೆ ಆಡಳಿತ ಮಂಡಳಿಯವರಲ್ಲಿ ಮಾಹಿತಿ ಪಡೆದಾಗ ಆತ ಅತ್ಯಂತ ಸ್ವಾಭಿಮಾನಿ, ಪ್ರಾಮಾಣಿಕ ಹುಡುಗ ಎಂದು ತಿಳಿಯಿತು. ಅಂತಹ ಗುಣಗಳನ್ನು ಎಲ್ಲರೂ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ನಮ್ಮ ಹಿಂದೆ ಬರುತ್ತದೆ. ಎಲ್ಲರಲ್ಲೂ ಸಾಮರ್ಥ್ಯ ಇರುತ್ತದೆ. ಆದರೆ, ಅದನ್ನು ಯಾರೂ ಸದುಪಯೋಗ ಪಡಿಸಿಕೊಳ್ಳುತ್ತಾರೆ ಅವರಿಗೆ ಸಾಧನೆ, ಸನ್ಮಾನ ಹುಡುಕಿಕೊಂಡು ಬರುತ್ತದೆ ಎಂದರು.
ಕಾಲೇಜು ಸಮಿತಿ ಅಧ್ಯ ಸತೀಶ್​ರೆಡ್ಡಿ ಮಾತನಾಡಿ, ಮದನ್​ ಕೇವಲ ನಮಗೆ ವಿದ್ಯಾರ್ಥಿಯಾಗಿರಲಿಲ್ಲ. ಆತನಲ್ಲಿ ಪ್ರತಿಭೆ ಮಾತ್ರ ನೋಡಿಲ್ಲ. ಆತನಲ್ಲಿದ್ದ ಎಲ್ಲ ಗುಣಗಳು ನಮಗೂ ಸೇರಿ ಇತರೆ ವಿದ್ಯಾರ್ಥಿಗಳಿಗೆ ಆದರ್ಶವಾಗಿವ ಎಂದರು.
ಮದನ್​ 596 ಅಂಕಗಳು ಪಡೆದು ಕಾಲೇಜಿಗೆ ರಾಜ್ಯಮಟ್ಟದಲ್ಲಿ ಸ್ಥಾನ ಸಿಕ್ಕಿದೆ. ಜತೆಗೆ ಕಾಮರ್ಸ್​ನಲ್ಲಿ ಪ್ರಿಯಾಂಕ, ಆರ್​. ನವ್ಯಾ ಮತ್ತು ಆಯೇಷಾ ಮೂವರೂ 592 ಅಂಕ ಪಡೆದು ಜಿಲ್ಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಶ್ರಾವ್ಯ 590, ಲೇಖನಾ 589, ಆಯೇಷಾ ಖಾನಂ 583, ವಿನಯ್​ 582, ಭಾನುಶ್ರೀ 582 ಅಂಕ ಪಡೆದಿದ್ದಾರೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net