ಮೇ 31, 2026ರ ಒಳಗಾಗಿ ನಿರ್ಮಾಣ ಪೂರ್ಣಗೊಂಡು, ಈಗಾಗಲೇ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ವಸತಿ ಕಟ್ಟಡಗಳ ವಿವರಗಳನ್ನು (ಅರ್ಜಿ ಸಂಖ್ಯೆ ಮತ್ತು ನೋಂದಣಿ ದಿನಾಂಕ) ಎಸ್ಕಾಂಗಳು ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು. ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಅರ್ಜಿದಾರರು ಮತ್ತು ಸೇವಾ ಸಂಪರ್ಕ ಕಲ್ಪಿಸುವ ಅಧಿಕಾರಿಗಳು ಇಬ್ಬರೂ ಸ್ಥಳದಲ್ಲಿ ಇರಬೇಕಾಗಿದ್ದು, ಕಟ್ಟಡದ ಭೌಗೋಳಿಕ ಮಾಹಿತಿ ಹೊಂದಿರುವ ‘ಜಿಯೋ ಟ್ಯಾಗ್ಡ್ ಮತ್ತು ಟೈಮ್ ಸ್ಟ್ಯಾಂಪ್ಡ್ೃ’ ಛಾಯಾಚಿತ್ರವನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕಾಗುತ್ತದೆ.