ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ

ತಿಕೋಟಾ ಪಟ್ಟಣದ ವಿರಕ್ತಮಠ ಸಭಾ ಭವನದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಇಂದುಶೇಖರ ಮಣೂರ, ಜಿ.ಎಸ್. ದೇಶಮುಖ, ಸಾತಲಿಂಗಯ್ಯ ಸಾಲಿಮಠ, ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶಶಿಕಲಾ ಲಂಗೂಟಿ, ರಾಜು ಸುಣಗಾರ ಇತರರಿದ್ದರು.
ತಿಕೋಟಾ ಪಟ್ಟಣದ ವಿರಕ್ತಮಠ ಸಭಾ ಭವನದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಇಂದುಶೇಖರ ಮಣೂರ, ಜಿ.ಎಸ್. ದೇಶಮುಖ, ಸಾತಲಿಂಗಯ್ಯ ಸಾಲಿಮಠ, ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶಶಿಕಲಾ ಲಂಗೂಟಿ, ರಾಜು ಸುಣಗಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಹೇಳಿಕೆ
  • ಪತ್ರಿಕಾ ದಿನಾಚರಣೆ

ತಿಕೋಟಾ : ಸತ್ಯವನ್ನು ಸಮಾಜಕ್ಕೆ ತಿಳಿಸುವುದು ಪತ್ರಿಕೆ ಜವಾಬ್ದಾರಿಯಾದರೆ ಪತ್ರಿಕೆಯಲ್ಲಿ ಕೆಲಸ ಮಾಡುವ ಪತ್ರಕರ್ತರ ಜವಾಬ್ದಾರಿಯು ಅಷ್ಟೇ ಪ್ರಮುಖವಾಗಿದೆ ಎಂದು ಜಿಲ್ಲಾ ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಹೇಳಿದರು.

ಪಟ್ಟಣದ ವಿರಕ್ತಮಠ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪತ್ರಕರ್ತರು ಜವಾಬ್ದಾರಿಯಿಂದ ಜೀವನದ ಹಂಗಿಲ್ಲದೆ ತಮ್ಮ ಬರವಣಿಗೆ ಮೂಲಕ ಸತ್ಯಾಸತ್ಯತೆ ಅಳೆದು ತೂಗಿ ಸಮಾಜಕ್ಕೆ ತೋರಿಸುವರು. ದೊಡ್ಡವರು ಇರಲಿ ಸಣ್ಣವರು ಇರಲಿ ದಾರಿ ತಪ್ಪಿದರೆ ಅವರನ್ನು ಸರಿದಾರಿಗೆ ತರುವುದೇ ಪತ್ರಕರ್ತರ ಕೆಲಸ ಎಂದರು.
ಹೆಸ್ಕಾಂ ಅಧಿಕಾರಿ ಜಿ.ಎಸ್. ದೇಶಮುಖ ಮಾತನಾಡಿ, ಸಮಾಜಕ್ಕೆ ಪತ್ರಕರ್ತರ ಸೇವೆ ಅಪಾರ. ನಿಮ್ಮ ಬರವಣಿಗೆ ಜನರಿಗೆ ದಾರಿದೀಪವಾಗಲಿ ಎಂದು ಹೇಳಿದರು.
ತಿಕೋಟಾ-ಬಬಲೇಶ್ವರ ತಾಲೂಕ ಕಾನಿಪ ಸಂಘದ ಅದ್ಯಕ್ಷ ಸಾತಲಿಂಗಯ್ಯ ಸಾಲಿಮಠ ಪತ್ರಿಕಾ ದಿನಾಚರಣೆ ಕುರಿತು ಮಾತನಾಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ ಚನ್ನಮಲ್ಲಿಕಾರ್ಜುನ ಮಾಹಾಸ್ವಾಮಿಗಳು ವಿರಕ್ತಮಠ ಮಾತನಾಡಿ, ಪತ್ರಕರ್ತರು ದೇಶಕ್ಕೆ ಅಮೂಲ್ಯ ರತ್ನಗಳು ದೇಶ ವಿದೇಶಗಳಲ್ಲಿ ಏನು ನಡೆಯುತ್ತದೆ ಎಂಬುದನ್ನು ಪತ್ರಿಕೆ ಮೂಲಕ ತಿಳಿದುಕೊಳ್ಳಲು ನಮಗೆ ಸದಾಕಾಲ ಕೆಲಸ ಮಾಡುತ್ತಾರೆ ಎಂದು ಹೇಳಿದರು. ಪಿಎಸ್‌ಐ ಶಶಿಕಲಾ ಲಂಗೂಟಿ, ಶಿರಸ್ತೆದಾರ ರಾಜು ಸುಣಗಾರ, ಲೇಪೂ ಕೊಣ್ಣೂರ, ರಾಜೇಂದ್ರ ಕುಲಕರ್ಣಿ, ಚಂದ್ರಶೇಖರ ಹಿರೇಮಠ, ಲಕ್ಷ್ಮಿ ಹಿರೇಮಠ, ಸಂಗೀತಾ ರಾಠೋಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net