ದೊಡ್ಡನಾಲ ಸ್ವಚ್ಛಗೊಂಡು ವರ್ಷಗಳೇ ಕಳೆದಿದೆ. ನಗರದ ಮಧ್ಯದಲ್ಲಿ ಹಾದು ಹೋಗಿರುವ ದೊಡ್ಡ ನಾಲಾವನ್ನು ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿವೆ. ನಗರದ ಚರಂಡಿ ನೀರು ಸರಾಗವಾಗಿ ಹರಿಯಲಿ ಎಂಬ ಉದ್ದೇಶದಿಂದ ದಶಕಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಮಾಡದೆ ದೊಡ್ಡನಾಲಾದ ತಡೆ ಗೋಡೆಗಳು ಹಾನಿಗೊಳಗಾಗಿವೆ. ಹಾಗೂ ನೀರು ಸರಾಗವಾಗಿ ಹರಿಯಲು ಹಾಕಿದ್ದ ಬೃಹತ್ ಪೈಪ್ಗಳಲ್ಲಿ ಕಲ್ಲು, ಮಣ್ಣು, ತ್ಯಾಜ್ಯ ಸಿಲುಕಿ ಕೊಳಚೆ ನೀರು ರಸ್ತೆ ಹಾಗೂ ಮನೆಗಳಿಗೂ ನುಗ್ಗುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.