ಏಡ್ಸ್​ ನಿಯಂತ್ರಣಕ್ಕೆ ಜನರ ಸಹಕಾರ ಅವಶ್ಯ

People's cooperation is essential to control AIDS
People's cooperation is essential to control AIDS
Published on
ಚಿಕ್ಕನಾಯಕನಹಳ್ಳಿ: ಸರ್ಕಾರಗಳು ಏಡ್ಸ್​ ನಿಯಂತ್ರಣಕ್ಕೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಅದರಲ್ಲಿ ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರ ಪಾತ್ರ ಮುಖ್ಯ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಎಸ್​.ಓ.ಸತೀಶ್​ ತಿಳಿಸಿದರು.
ಪಟ್ಟಣದ ನೆಹರು ವೃತ್ತದಲ್ಲಿ ಸೋಮವಾರ ಆರೋಗ್ಯ ಇಲಾಖೆ, ತಾಲೂಕು ಕಾನೂನು ಸೇವಾಸಮಿತಿ ಹಾಗೂ ವಿವಿಧ ಸಂಘ&ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಏಡ್ಸ್​ ದಿನದ ಅಂಗವಾಗಿ ಆಯೋಜಿಸಿದ್ದ ಎಚ್​ಐವಿ ಬಗ್ಗೆ ಸಾರ್ವಜನಿಕ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಚ್​ಐವಿ ನಿಯಂತ್ರಣಕ್ಕೆ ಸರ್ಕಾರವು ಯೋಜನೆಗಳನ್ನು ಜಾರಿಗೊಳಿಸಿದೆ. ಸೂಕ್ತ ಚಿಕಿತ್ಸೆ ಮೂಲಕ ಸೋಂಕಿತರು ಉತ್ತಮ ಜೀವನ ರೂಪಿಸಿಕೊಳ್ಳಬಹುದಾಗಿದೆ ಎಂದರು.
ನವೋದಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರವಿಕುಮಾರ್​ ಮಾತನಾಡಿ, ಆರೋಗ್ಯ ಇಲಾಖೆ ಎಚ್​ಐವಿ ನಿಯಂತ್ರಣದ ಬಗೆಗಿನ ಕಾರ್ಯ ಪ್ರಶಂಸನೀಯ. ಸಾರ್ವಜನಿಕರು ಸೂಕ್ತ ಮಾರ್ಗಗಳನ್ನು ಅನುಸರಿಸುವ ಮೂಲಕ ಹಾಗೂ ಜಾಗರೂಕರಾಗುವ ಮೂಲಕ ಎಚ್​ಐವಿ ಮುಕ್ತ ಭಾರತ ನಿಮಾರ್ಣಕ್ಕೆ ಮುಂದಾಗಬೇಕಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ವಕೀಲ ಜ್ಞಾನಮೂರ್ತಿ ಮಾತನಾಡಿ, ಸೋಂಕಿತರಿಗೆ ಇರುವ ಕಾನೂನು ಸೇವೆಗಳ ಬಗ್ಗೆ ವಿವರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net