ಎಚ್‌ಐವಿ ಸೋಂಕಿತರಿಗೆ ಹೃದಯ ರಕ್ತನಾಳದ ಅಪಾಯ ಹೆಚ್ಚು

A symposium on ‘HIV and the Heart’ organized in collaboration with Jayadeva Institute of Cardiology and Research and AIDS Society India was inaugurated by Narayana Health President Dr. Deviprasad Shetty. Jayadeva Hospital Director Dr. B. Dinesh, Professor Dr. H.S. Nataraj Shetty and others were present.
A symposium on ‘HIV and the Heart’ organized in collaboration with Jayadeva Institute of Cardiology and Research and AIDS Society India was inaugurated by Narayana Health President Dr. Deviprasad Shetty. Jayadeva Hospital Director Dr. B. Dinesh, Professor Dr. H.S. Nataraj Shetty and others were present.
Published on

ಪ್ರಮುಖ ಮುಖ್ಯಾಂಶಗಳು

  • * ‘ಎಚ್‌ಐವಿ ಮತ್ತು ಹೃದಯ’ ವಿಚಾರಸಂಕಿರಣದಲ್ಲಿ ತಜ್ಞರ ಅಭಿಮತ
  • * ಜಯದೇವ ಆಸ್ಪತ್ರೆಯಲ್ಲಿ 1,209 ರೋಗಿಗಳಿಗೆ ಚಿಕಿತ್ಸೆ

ಬೆಂಗಳೂರು: ಎಚ್‌ಐವಿ ಸೋಂಕಿತರಲ್ಲಿ ಹೆಚ್ಚಾಗಿ ಹೃದಯ ರಕ್ತನಾಳದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರ ಹೃದಯದ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೃದ್ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಏಡ್ಸ್ ಸೊಸೈಟಿ ಇಂಡಿಯಾ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಎಚ್‌ಐವಿ ಮತ್ತು ಹೃದಯ’ ವಿಷಯ ಕುರಿತ ವಿಚಾರಸಂಕಿರಣದಲ್ಲಿ ಎಚ್‌ಐವಿ ಪೀಡಿತರ ಹೃದಯದ ಆರೋಗ್ಯದ ಬಗ್ಗೆ ತಜ್ಞರು ಚರ್ಚಿಸಿದರು.
ಜಯದೇವ ಹೃದ್ರೋಗ ಸಂಸ್ಥೆ ಪ್ರಾಧ್ಯಾಪಕ ಡಾ.ಎಚ್.ಎಸ್. ನಟರಾಜ್ ಶೆಟ್ಟಿ ಮಾತನಾಡಿ, ಎಚ್‌ಐವಿ ಪೀಡಿತ ಹೃದ್ರೋಗಿಗಳಿಗೆ 2013ರಿಂದ ಚಿಕಿತ್ಸೆ ನೀಡುತ್ತಾ ಬಂದಿದ್ದೇನೆ. ಈವರೆಗೆ 1,209 ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ಎಚ್‌ಐವಿ ಜತೆಗೆ ಬದುಕುತ್ತಿರುವವರ ಸಮಗ್ರ ಆರೋಗ್ಯದ ಆರೈಕೆ ಸುಧಾರಿಸುವುದು ನಮ್ಮ ಉದ್ದೇಶ. ಎಚ್‌ಐವಿ ಚಿಕಿತ್ಸಾ ಕ್ಷೇತ್ರದಲ್ಲಿ ಗಮನಾರ್ಹವಾದ ಪ್ರಗತಿಯಾಗಿದೆ. ಆ್ಯಂಟಿರೆಟ್ರೋವೈರಲ್ ಥೆರಪಿ ಚಿಕಿತ್ಸೆಯಿಂದ ಎಚ್‌ಐವಿ ಪೀಡಿತರು ಹೆಚ್ಚುಕಾಲ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಎಚ್‌ಐವಿ ಸೋಂಕು ಮತ್ತು ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್ ಮಾತನಾಡಿದರು. ಎಚ್‌ಐವಿ ಜತೆಗೆ ಬದುಕುತ್ತಿರುವವರ ಹೃದಯ ರಕ್ತನಾಳದ ಆರೈಕೆ, ಹೃದಯ ಶಸ್ತ್ರಚಿಕಿತ್ಸೆ, ಎಚ್‌ಐವಿ ನಿರ್ವಹಣೆ ಮತ್ತು ಚಿಕಿತ್ಸೆ ಸೇರಿ ವಿವಿಧ ವಿಷಯಗಳ ಬಗ್ಗೆ ವಿಚಾರಸಂಕಿರಣದಲ್ಲಿ ತಜ್ಞರು ಚರ್ಚಿಸಿದರು.

ಎಚ್‌ಐವಿ ಪೀಡಿತರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಂತಹವರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ಸಂಖ್ಯೆ ವಿರಳ. ಅವರ ರಕ್ತವನ್ನು ಸ್ಪರ್ಶಿಸಿದಾಗ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದ್ದರಿಂದ ಚಿಕಿತ್ಸೆ ಒದಗಿಸಲು ಕೆಲ ಆಸ್ಪತ್ರೆಗೆಳು ಹಿಂದೇಟು ಹಾಕುತ್ತವೆ. ಜಯದೇವ ಹೃದ್ರೋಗ ಸಂಸ್ಥೆಯು ಅಂತಹ ಸಾವಿರಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಮೂಲಕ ಮೈಲಿಗಲ್ಲು ಸ್ಥಾಪಿಸಿದೆ.

— ಡಾ.ದೇವಿಪ್ರಸಾದ್ ಶೆಟ್ಟಿ, ನಾರಾಯಣ ಹೆಲ್ತ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net