ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ಎಂತಲೂ ಕರೆಯಲಾಗುವ ಪೀಣ್ಯ ಎಲಿವೇಟೆಡ್ ಫ್ಲೈಓವರ್ ನೆಲಮಂಗಲ ಸೇರಿದಂತೆ ಉತ್ತರ ಕರ್ನಾಟಕದ 22 ಜಿಲ್ಲೆಗಳನ್ನು ಸಂಪರ್ಕಿಸಲು ಅನುಕೂಲಕರವಾಗಿರುವ ಹೆದ್ದಾರಿಯಾಗಿದೆ. ಅಂತಿಮ ಹಂತದ 'ಲೋಡ್ ಟೆಸ್ಟಿಂಗ್' ನಡೆಯುತ್ತಿರುವ ಕಾರಣ, ಏಪ್ರಿಲ್ 13 ರಿಂದ 5 ದಿನಗಳ ಕಾಲ ಪೀಣ್ಯ ಫ್ಲೈಓವರ್ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.