ಧಾರ್ಮಿಕ ಕಾರ್ಯಕ್ರಮಗಳಿಂದ ನೆಮ್ಮದಿ religious

ಧಾರ್ಮಿಕ ಕಾರ್ಯಕ್ರಮಗಳಿಂದ ನೆಮ್ಮದಿ religious
ಧಾರ್ಮಿಕ ಕಾರ್ಯಕ್ರಮಗಳಿಂದ ನೆಮ್ಮದಿ religious
Published on
ರಾಯಲ್ಪಾಡು: ಪ್ರತಿನಿತ್ಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸು ಪ್ರಕ್ಷುಬ್ಧಗೊಂಡಿರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಾಗ ಮನಸ್ಸು ಶಾಂತಿ, ನೆಮ್ಮದಿ ದೊರೆಯುತ್ತದೆ.
ಇಂದು ದೇವಾಲಯಗಳು ನೆಮ್ಮದಿ ಕೇಂದ್ರಗಳಾಗಿ ಮಾರ್ಪಟ್ಟಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು. religious
ರಾಯಲ್ಪಾಡು ಸಮೀಪದ ಬುಧವಾರ ಗನಿಬಂಡೆಯ ಶ್ರೀ ಲಕ್ಷಿ$್ಮವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಮನುಷ್ಯನು ದಿನನತ್ಯದ ಜಂಜಾಟಗಳಲ್ಲಿ ತೊಡಗಿರುತ್ತಾನೆ. ಅವನಿಗೆ ಮಾನಸಿಕವಾಗಿ ಒಂದಿಲ್ಲದೊಂದು ಸಮಸ್ಯೆಗಳು ಇದ್ದೇ ಇರುತ್ತದೆ. ಎಷ್ಟೇ ಮಾನಸಿಕ ಒತ್ತಡಗಳಿದ್ದರೂ ಸಹ ದೇವಾಲಯಗಳಿಗೆ ಬಂದು ಹೋದರೆ ಮನಸ್ಸು ಸಂತಸಗೊಳ್ಳುತ್ತದೆ. ಮಾನಸಿಕವಾಗಿ ಸದೃಢವಾಗಿ ಇರಬಹುದು ಎಂದರು.
ಜಿಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್​.ನಾರಾಯಣಸ್ವಾಮಿ ಮಾತನಾಡಿ, ಧಾರ್ಮಿಕ ಹಾಗೂ ಗುಣಾತ್ಮಕ ರೀತಿಯ ಜೀವನವನ್ನು ನಡೆಸುವುದೊಂದೇ ಮನುಷ್ಯರಿಗೆ ಸುಖದಾಯಕವಾದದು, ಚಿಂತೆಯಿಲ್ಲದ ಮತ್ತು ಸುಖ ಸಂತೋಷದ ಜೀವನ ನಡೆಸಬೇಕೆಂಬ ದೃಢಸಂಕಲ್ಪವಿರುವುದಾದರೆ ಧರ್ಮದ ದಾರಿಯನ್ನು ತುಳಿಯಲೇಬೇಕು ಎಂದರು.
ಭಾರತೀಯ ಹಿಂದೂ ಸಂಸತಿಯಲ್ಲಿ ಧಾರ್ಮಿಕ ಆಚರಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದರಿಂದಾಗಿ ಭಕ್ತರಲ್ಲಿ ನಾವುಗಳು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಶಿಸ್ತು ಮತ್ತು ಶ್ರದ್ಧೆ ರೂಢಿಸಿಕೊಳ್ಳಲು ಸಹಕಾರಿಯಾಗುತ್ತದೆ. ದೇವರ ಮೇಲಿನ ಭಕ್ತಿ ಮತ್ತು ಭಯದಲ್ಲಿ ಜೀವನ ಸಾಗಿಸುವುದರಿಂದಾಗಿ ಶಾಂತಿಯ ವಾತಾವರಣ ನಿಮಾರ್ಣವಾಗುತ್ತದೆ ಎಂದರು.
ದೇವಾಲಯದಲ್ಲಿ ಬೆಳಗ್ಗೆಯಿಂದ ದೇವರಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಪಟ್ಟಣದ ನಾಗರಿಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ತಂಡೋಪ ತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net