ಗುರುವಿನ ಸ್ಮರಣೆಯಿಂದ ಶಾಂತಿ-ನೆಮ್ಮದಿ ಸಾಧ್ಯ

ತಾಳಿಕೋಟೆಯ ಹೇಮರಡ್ಡಿ ಮಲ್ಲಮ್ಮ ತಾಯಿಯ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಬಿ.ಎಸ್. ಪಾಟೀಲ ಉದ್ಘಾಟಿಸಿದರು. ಸಿ.ಎಂ. ಹಿರೇಮಠ, ಎಸ್.ಎಂ. ಬೇನಾಳಮಠ, ಆರ್.ಎಸ್. ಪಾಟೀಲ ಕೂಚಬಾಳ ಇತರರಿದ್ದರು.
ತಾಳಿಕೋಟೆಯ ಹೇಮರಡ್ಡಿ ಮಲ್ಲಮ್ಮ ತಾಯಿಯ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಬಿ.ಎಸ್. ಪಾಟೀಲ ಉದ್ಘಾಟಿಸಿದರು. ಸಿ.ಎಂ. ಹಿರೇಮಠ, ಎಸ್.ಎಂ. ಬೇನಾಳಮಠ, ಆರ್.ಎಸ್. ಪಾಟೀಲ ಕೂಚಬಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿ.ಎಸ್. ಪಾಟೀಲ ಯಾಳಗಿ ಹೇಳಿಕೆ
  • ಗುಡ್ಡಾಪುರ ದಾನಮ್ಮ ದೇವಿ ಪುರಾಣ ಪ್ರವಚನ ಪ್ರಾರಂಭೋತ್ಸವ
ತಾಳಿಕೋಟೆ: ಗುರುವಿನ ಆಶೀರ್ವಾದವಿದ್ದರೆ ಕಷ್ಟಗಳ ಮಧ್ಯೆಯೂ ಜೀವನ ಸುಖ, ನೆಮ್ಮದಿಯಾಗಿರುತ್ತದೆ. ಗುರುವಿನ ಸ್ಮರಣೆಯಿಂದ ಬಡತನ ತೊಲಗಿಸಿ ಶಾಂತಿ-ನೆಮ್ಮದಿ ಬದುಕು ಸಾಗಿಸಬಹುದು. ಈ ಶಾಂತಿ ನೆಮ್ಮದಿಗೆ ಪುರಾಣ ಪ್ರವಚನಗಳು ದಾರಿದೀಪ ಎಂದು ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಎಸ್. ಪಾಟೀಲ ಯಾಳಗಿ ಹೇಳಿದರು.
ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಮೇ 10ರಂದು ಜರುಗುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ 604ನೇ ಜಯಂತಿಯ ನಿಮಿತ್ತ ಭಾನುವಾರ ಹಮ್ಮಿಕೊಂಡಿರುವ ಗುಡ್ಡಾಪುರ ದಾನಮ್ಮ ದೇವಿ ಪುರಾಣ ಪ್ರವಚನ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುರಾಣ ಪ್ರವಚನಕಾರ ಯಾಳಗಿ ಸೋಮಶೇಖರ ಮಠದ ಬಸಯ್ಯ ಶಾಸೀ ಅವರು ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪುರಾಣ ಪ್ರವಚನ ಮೇ 10ರವರೆಗೆ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ ಜರುಗಲಿದೆ ಸಮಾಜ ಬಾಂದವರು ಭಾಗವಹಿಸಿ ದಾನಮ್ಮ ದೇವಿ ಹಾಗೂ ಹೇಮರಡ್ಡಿ ಮಲ್ಲಮ್ಮನ ಕೃಪೆಗೆ ಪಾತ್ರರಾಗಬೇಕೆಂದರು.
ಶಾಂತಮ್ಮತಾಯಿ ಕೋಳೂರ, ಸಿ.ಎಂ. ಹಿರೇಮಠ, ಎಸ್.ಎಂ. ಬೇನಾಳಮಠ, ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ, ಆರ್.ಎಸ್. ಪಾಟೀಲ ಕೂಚಬಾಳ, ಶ್ರೀಕಾಂತ ಪತ್ತಾರ, ಎಸ್.ಎಸ್. ಗಡೇದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net