ಗೌರಿಬಿದನೂರು ತಾಲೂಕಿನ ನರಸಾಪುರ ಗ್ರಾಮದಲ್ಲಿ ಕೆ.ಎಚ್.ಪಿ ಫೌಂಡೇಷನ್ ವತಿಯಿಂದ ಕ್ಷೇತ್ರದ ಮಹಿಳೆಯರಿಗೆ ಬಾಗಿನವನ್ನು ಶಾಸಕ ಕೆ.ಎಚ್,ಪುಟ್ಟ ಸ್ವಾಮಿಗೌಡ ವಿತರಿಸಿದರು.
Published on:
Copied
Follow Us
ಗೌರಿಬಿದನೂರು :
ಕ್ಷೇತ್ರದ ಮಹಿಳೆಯರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಡುವುದು ಸಂಸ್ಥೆಯ ಸಂಕಲ್ಪವಾಗಿದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಹೇಳಿದರು.
ಗೌರಿ&ಗಣೇಶ ಹಬ್ಬದ ಪ್ರಯುಕ್ತ ಕೆ.ಎಚ್.ಪಿ ಫೌಂಡೇಷನ್ಯಿಂದ ಹಮ್ಮಿಕೊಂಡಿದ್ದ ಕ್ಷೇತ್ರದ ಮಹಿಳೆಯರಿಗೆ ಬಾಗಿನ ವಿತರಿಸುವ ಕಾರ್ಯಕ್ಕೆ ನರಸಾಪುರದಲ್ಲಿ ಚಾಲನೆ ನೀಡಿ ಮಾತನಾಡಿ, ಹಿಂದೂ ಸಂಪ್ರದಾಯದಲ್ಲಿ ಸಮೃದ್ಧಿ, ಸೌಭಾಗ್ಯದ ಸಂಕೇತವಾಗಿ ವರಮಹಾಲಕ್ಷಿ$್ಮ ಹಾಗೂ ಗೌರಿ&ಗಣೇಶ ಹಬ್ಬಗಳಲ್ಲಿ ಸುಮಂಗಲಿಯರಿಗೆ ಬಾಗಿನ ವಿತರಿಸಲಾಗುತ್ತದೆ.
ಕ್ಷೇತ್ರದ ಪ್ರತಿಯೊಬ್ಬ ಮಹಿಳೆಯರಿಗೆ ಒಳಿತಾಗಲಿ ಎಂದು ಆಶಿಸಿ 6 ವರ್ಷಗಳಿಂದ ಸಂಸ್ಥೆಯಿಂದ ಬಾಗಿನ ವಿತರಿಸಲಾಗುತ್ತಿದೆ. ಈ ಬಾರಿ 1 ಲಕ್ಷಕ್ಕೂ ಅಧಿಕ ಮಂದಿಗೆ ಬಾಗಿನ ವಿತರಿಸಲಾಗುವುದು. ಕ್ಷೇತ್ರದಲ್ಲಿ ಬರ ಆವರಿಸಿದ್ದು, ಮಳೆ ಬೆಳೆಯಾಗಲಿ. ಸುಖ ಸಮೃದ್ಧಿ ಎಲ್ಲೆಡೆ ನೆಲೆಸಲಿ.
ಮಹಿಳೆಯರಿಗೆ ಸ್ವಾವಲಂಬಿ ಜೀವನ ಕಲ್ಪಿಸಿಕೊಡುವ ಉದ್ದೇಶದಿಂದ ಹೊಲಿಗೆ ತರಬೇತಿ, ಯುವತಿಯರಿಗೆ ಕಂಪ್ಯೂಟರ್, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸೇರಿ ವಿವಿಧ ಕಾರ್ಯಕ್ರಮ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದು, ತಾಲೂಕಿನ ಸಮಗ್ರ ಅಭಿವೃದ್ಧಿ ಜತೆಗೆ ಸಂಸ್ಥೆ ಸಾಮಾಜಿಕ ಸೇವಾ ಕಾರ್ಯ ಮುಂದುವರಿಸಿಕೊಂಡು ಹೋಗುತ್ತೇನೆ ಎಂದರು.
ಮುಖಂಡ ಜಿ.ನಾಗೇಂದ್ರ ಮಾತನಾಡಿ, ಕೆಎಚ್ಪಿ ಫೌಂಡೇಷನ್ ಸಮಾಜ ಮುಖಿ ಕಾರ್ಯ ಕ್ಷೇತ್ರದಲ್ಲಿ ಮನೆಮಾತಾಗಿವೆ. ಕ್ಷೇತ್ರದ ಜನರ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಮಹಿಳೆಯರು, ರೈತರು, ನಿರುದ್ಯೋಗ ಯುವಕ, ಯುವತಿಯರಿಗೆ ಅನುಕೂಲವಾಗುತ್ತಿದೆ ಎಂದರು.