ವಾಡಿ: ಹಲಕರ್ಟಿ ಕೃಷಿ ಪತ್ತಿನ ಸಹಕಾರ ಸಂಘದ 2ನೇ ಅವಧಿ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಸೈಯದ್ ಇಮ್ತಿಯಾಜ್ ಪಟೇಲ್ ಅವಿರೋಧ ಆಯ್ಕೆಯಾಗಿದ್ದಾರೆ. ಈರಣ್ಣ ಇಸಬಾ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಇಮ್ತಿಯಾಜ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ್ದರಿಂದ ಚುನಾವಣಾಧಿಕಾರಿ ಪ್ರಿಯಾ ಚವ್ಹಾಣ್ ಅವಿರೋಧ ಆಯ್ಕೆ ಪ್ರಕಟಿಸಿದರು. ಕಟ್ಟಮನಿ ಹಿರೇಮಠದ ಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯರು ಅಧ್ಯಕ್ಷರನ್ನು ಸನ್ಮಾನಿಸಿ ಆಶೀರ್ವದಿಸಿದರು. ಪ್ರಮುಖರಾದ ಜಗದೀಶ ಸಿಂಧಿಯಾ, ಇಬ್ರಾಹಿಂ ಪಟೇಲ್, ಮಲ್ಲಿನಾಥಗೌಡ ಸನ್ನತಿ, ದೇವಿಂದ್ರರೆಡ್ಡಿ ತೋಟದ, ನಾಗೇಂದ್ರ ಜೈಗಂಗಾ, ಚಂದ್ರಕಾಂತ ಮೇಲಿನಮನಿ, ಈರಣ್ಣ ಇಸಬಾ, ಶರಣು ಬೊಮ್ಮನಹಳ್ಳಿ, ಶರಣು ನಾಟೆಕಾರ ವಾಡಿ, ಸಿದ್ದು ಮುಗುಟಿ, ರಾವೇಂದ್ರ ಅಲ್ಲಿಪುರ, ಪ್ರಕಾಶ ಚಂದನಕೇರಿ, ರಾಜುಗೌಡ ಪೊಲೀಸ್ ಪಾಟೀಲ್, ಗುರುನಾಥ ಮಣಿಗಿರಿ, ಗೋವಿಂದ ಜಾಧವ್, ಗೊರೇಖ್ ಪಾಷಾ, ಸೈಯದ್ ಎಕ್ಬಾಲ್ ಪಾಷಾ, ಅಲ್ತ್ಾ ವಾಡಿ, ಡಾ. ಸಾದಿಕ್ ಪಟೇಲ್, ಪಾಷಾ ಪಟೇಲ್, ಬಸವರಾಜ ಲೋಕನಹಳ್ಳಿ, ಶರಣಪ್ಪ ಹಿಟ್ಟಿನ, ಜಬಿ ಜುನೈದಿ, ಮೈಲಾರಿ ಸುಣಗಾರ ಇತರರಿದ್ದರು.