ರೈಲು ಪ್ರಯಾಣಿಕರೇ ಎಚ್ಚರ!; ಎರ್ನಾಕುಲಂನಿಂದ ಬೆಂಗಳೂರಿಗೆ ಹೊರಟಿದ್ದ Vande Bharat ಎಕ್ಸ್​ಪ್ರೆಸ್​ನಲ್ಲಿ ಸತ್ತ ಮಂಡಲ ಹಾವು ಪತ್ತೆ

Passengers panic as dead viper spotted on Bengaluru-bound Vande Bharat seat
Passengers panic as dead viper spotted on Bengaluru-bound Vande Bharat seat
Published on

ಪ್ರಮುಖ ಮುಖ್ಯಾಂಶಗಳು

  • ಎರ್ನಾಕುಲಂ-ಕೆಎಸ್‌ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್​ಪ್ರೆಸ್​ನಲ್ಲಿ ಮಂಡಲ ಹಾವು ಪತ್ತೆ
  • ಮಹಿಳಾ ಪ್ರಯಾಣಿಕರ ಸೀಟಿನಲ್ಲಿ ಕಂಡು ಬಂದ ಸತ್ತ ಮಂಡಲದ ಹಾವು ಪತ್ತೆ.
  • ಸಿಬ್ಬಂದಿ ನೆರವಿನಿಂದ ಹಾವನ್ನು ಹೊರಹಾಕಲಾಗಿದ್ದು, 'ರೈಲ್ಮಡದ್' ಪೋರ್ಟಲ್‌ನಲ್ಲಿ ದೂರು ದಾಖಲು,

Passengers panic as dead viper spotted on Bengaluru-bound Vande Bharat seat:

ಕೇರಳದಿಂದ ಬೆಂಗಳೂರಿಗೆ ಹೊರಡಬೇಕಿದ್ದ ವಂದೇ ಭಾರತ್​ ರೈಲಿನಲ್ಲಿ ಸತ್ತ ಮಂಡಲ ಹಾವು ಪತ್ತೆಯಾದ ಪರಿಣಾಮ, ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. ಸದ್ಯ ರೈಲ್ವೆ ಅಧಿಕಾರಿಗಳು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲು ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಆಗಸ್ಟ್ 14, ಶುಕ್ರವಾರ ಮಧ್ಯಾಹ್ನ 2:30 ರ ಸುಮಾರಿಗೆ ಕೇರಳದ ಎರ್ನಾಕುಲಂ ಜಂಕ್ಷನ್‌ನಿಂದ ಕೆಎಸ್‌ಆರ್ ಬೆಂಗಳೂರಿಗೆ ಹೊರಡಬೇಕಿದ್ದ ರೈಲು ಸಂಖ್ಯೆ 26652 ರ ಸಿ-6 (C6)ನಲ್ಲಿ ಈ ಘಟನೆ ನಡೆದಿದೆ. ರೈಲು ತನ್ನ ಪ್ರಯಾಣವನ್ನು ಆರಂಭಿಸುವ ಮುನ್ನವೇ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸೀಟಿನ ಮೇಲಿತ್ತು ಮಂಡಲ ಹಾವು

ಎರ್ನಾಕುಲಂನಲ್ಲಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವಿನು ವರ್ಗೀಸ್ ಅವರು ತಮ್ಮ ಎರಡು ವರ್ಷದ ಮಗುವಿನೊಂದಿಗೆ ಕೊಯಮತ್ತೂರಿಗೆ ಪ್ರಯಾಣಿಸಲು ಟಿಕೆಟ್​ ಬುಕ್​ ಮಾಡಿಕೊಂಡಿದ್ದರು. ಶುಕ್ರವಾರ ವಿಶ್ರಾಂತಿ ಗೃಹಕ್ಕೆ ಹೋಗಿ ತಮ್ಮ ಆಸನಕ್ಕೆ ಹಿಂತಿರುಗಿದಾಗ ಸೀಟಿನ ಮೇಲೆ ಮಂಡಲದ ಹಾವು ಸತ್ತು ಬಿದ್ದಿರುವುದನ್ನು ಗಮನಿಸಿದ್ದಾರೆ.
ಇದರಿಂದ ಭಯಭೀತರಾದ ಅವರು ಹಾಗೂ ಇತರೆ ಪ್ರಯಾಣಿಕರು ತಕ್ಷಣವೇ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ ಹಾಗೂ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಶೀಘ್ರವೇ ಕಾರ್ಯಪ್ರವೃತ್ತರಾದ ರೈಲು ಸಿಬ್ಬಂದಿ ಪ್ರಯಾಣಿಕರ ಸಹಾಯ ಪಡೆದು, ಸತ್ತ ಹಾವನ್ನು ಕೋಚ್‌ನಿಂದ ಹೊರಹಾಕಲಾಯಿತು.

ದೂರು ದಾಖಲು

ಹಾವನ್ನು ಹೊರ ಹಾಕಿದ ಬಳಿಕ ನಿಟ್ಟುಸಿರು ಬಿಟ್ಟ ಪ್ರಯಾಣಿಕರು...ರೈಲ್ಮಡದ್ ಪೋರ್ಟಲ್ ಮೂಲಕ ಅಧಿಕೃತ ದೂರು ದಾಖಲಿಸಿದ್ದಾರೆ. ನಾವು ಪ್ರಯಾಣಕ್ಕಾಗಿ ತುಂಬಾ ಹಣ ಖರ್ಚು ಮಾಡುತ್ತಿದ್ದೇವೆ. ವ್ಯವಸ್ಥೆ ಹೀಗಿದ್ದರೆ ಹೇಗೆ. ಇದನ್ನು ಹೊರಗಿನಿಂದ ಯಾರೋ ತಂದು ಹಾಕಿಲ್ಲ ಅದಂತು ನಿಜ..ಇಂತಹ ತಪ್ಪುಗಳು ಮುಂದೆಂದೂ ಆಗದಂತೆ ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದಿದ್ದಕ್ಕಾಗಿ ರೈಲ್ವೆ ಸಿಬ್ಬಂದಿ ಬಂದು ಕ್ಷಮೆಯಾಚಿಸಿದರು ಎಂದು ವಿನು ವರ್ಗೀಸ್ ಹೇಳಿದರು.
ಸಾಮಾನ್ಯ ರೈಲು ಕೋಚ್‌ಗಳಂತೆ ಅಲ್ಲದೆ, ವಂದೇ ಭಾರತ್ ರೈಲುಗಳು ಸಂಪೂರ್ಣ ಹವಾನಿಯಂತ್ರಿತವಾಗಿದ್ದು ಸೀಲ್ ಮಾಡಲಾದ ಗ್ಯಾಂಗ್‌ವೇಗಳು ಮತ್ತು ನಿಗದಿತ ನಿಲ್ದಾಣಗಳಲ್ಲಿ ಮಾತ್ರ ತೆರೆಯುವ ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿರುತ್ತವೆ. ಹೀಗಿರುವಾಗ ಪ್ರಯಾಣಿಕರ ಕ್ಯಾಬಿನ್‌ ಒಳಗೆ ಹಾವು ಪ್ರವೇಶಿಸಿರುವುದು ಅಸಾಮಾನ್ಯವಾಗಿದ್ದು, ರೈಲಿನಲ್ಲಿನ ಕೀಟ ನಿಯಂತ್ರಣ ಮತ್ತು ಸುರಕ್ಷತಾ ಶಿಷ್ಟಾಚಾರಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಹಿಂದೆಯೂ ಪತ್ತೆಯಾಗಿತ್ತು ಹಾವು

ವಂದೇ ಭಾರತ್ ರೈಲಿನಲ್ಲಿ ಹಾವು ಪತ್ತೆಯಾಗಿರುವುದು ಇದು ಮೊದಲ ಬಾರಿಯಲ್ಲ. 2025ರ ಡಿಸೆಂಬರ್‌ನಲ್ಲಿ ಮುಂಬೈ-ಸೊಲಾಪುರ ವಂದೇ ಭಾರತ್ ರೈಲಿನೊಳಗೆ ಪ್ರಯಾಣಿಕರೊಬ್ಬರು ಉದ್ದೇಶಪೂರ್ವಕವಾಗಿ ಹಾವನ್ನು ಇರಿಸಿದ್ದಾರೆ ಎಂದು ಆರೋಪಿಸಲಾಗಿತ್ತು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net