ಸದ್ಯ ಪಟ್ಟಿಯಲ್ಲಿರುವ ಅಥ್ಲೀಟ್‌ಗಳ ಪೈಕಿ 30 ಮಂದಿ ತಲಾ 3 ಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನ ಸೆಳೆಯಲಿದ್ದಾರೆ. ಭಾರತದ 19 ರಾಜ್ಯ ಹಾಗೂ ಸರ್ವಿಸಸ್‌ನ ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದಾರೆ. ಕರ್ನಾಟಕದ 15 ಅಥ್ಲೀಟ್‌ಗಳಿದ್ದರೆ, ಅತಿಹೆಚ್ಚು ಅಥ್ಲೀಟ್‌ಗಳು ಹರ್ಯಾಣ ರಾಜ್ಯದವರಾಗಿದ್ದಾರೆ. ಹರ್ಯಾಣದ 84 ಮಂದಿ ಸ್ಪರ್ಧೆಗಿಳಿಯಲಿದ್ದಾರೆ. ಗೋವಾದ ಏಕೈಕ ಪ್ಯಾರಾ ಅಥ್ಲೀಟ್ ಪಾಲ್ಗೊಳ್ಳುತ್ತಿರುವುದು ಕೂಡ ವಿಶೇಷ.