ಪಾನಿಪುರಿ ವಿಚಾರಕ್ಕೆ ಪುಂಡರ ದಾಂಧಲೆ / ANEKAL

ಪೊಲೀಸರಿಗೆ ದೂರು ನೀಡಿದ್ದಕ್ಕೆ ಗೂಂಡಾಗಿರಿ ಪ್ರದರ್ಶಿಸಿದ ಪುಡಿರೌಡಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು.
ಪೊಲೀಸರಿಗೆ ದೂರು ನೀಡಿದ್ದಕ್ಕೆ ಗೂಂಡಾಗಿರಿ ಪ್ರದರ್ಶಿಸಿದ ಪುಡಿರೌಡಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು.
Published on
ಆನೇಕಲ್ : ಪಾನಿಪುರಿ ಕೊಡಲಿಲ್ಲ ಎಂಬ ಕಾರಣಕ್ಕೆದಾಂಧಲೆ ಎಬ್ಬಿಸಿದ ಪುಂಡರು ಅಂಗಡಿಯನ್ನೇ ಧ್ವಂಸ ಮಾಡಿ, ಅಂಗಡಿ ಮಾಲೀಕನ ಮನೆಯ ಬಳಿ ಹೋಗಿ ಡ್ರ್ಯಾಗರ್​ ಮತ್ತು ಲಾಂಗ್​ ಝಳಪಿಸಿ ಗೂಂಡಾಗಿರಿ ನಡೆಸಿರುವ ಟನೆ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ.
ನ.4ರಂದು ಪುಡಿ ರೌಡಿ ಪ್ರಜ್ವಲ್​ ಕುಡಿದ ಮತ್ತಿನಲ್ಲಿ ಸ್ನೇಹಿತನ ಜತೆ ಪಾನಿಪುರಿ ತಿನ್ನಲು ಬಂದಿದ್ದ. ಮೊದಲು ಇದೇ ವಿಚಾರವಾಗಿ ಗಲಾಟೆಯಾಗಿದೆ. ಬಳಿಕ ಪಾನಿಪುರಿ ತಿಂದು ದುಡ್ಡು ಕೊಡದೆ ವ್ಯಾಪಾರಿಯನ್ನು ನಿಂದಿಸಿ ಅಂಗಡಿ ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ವ್ಯಾಪಾರಿ ಮನೆಯ ಬಳಿ ಡ್ರಾ$ಗರ್​ಹಿಡಿದು ಬಂದ ಪುಡಿರೌಡಿಗಳು ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದಾರೆ.
ಪುಡಿರೌಡಿಗಳು ಅಂಗಡಿಯನ್ನುಧ್ವಂಸ ಮಾಡಿದ್ದ ಬಗ್ಗೆ ಸ್ಥಳಿಯ ಯುವಕರ ಬಳಿ ವ್ಯಾಪಾರಿ ಹೇಳಿಕೊಂಡಿದ್ದ. ಆತನಿಗೆ ಧೈರ್ಯ ಹೇಳಿ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ವಿಷಯ ತಿಳಿದು ಮತ್ತೆ ಬೈಕ್​ನಲ್ಲಿ ಪುಡಿರೌಡಿ ಪ್ರಜ್ವಲ್​ ಹಾಗೂ ಮತ್ತಿಬ್ಬರು ಡ್ರಾ$್ಯಗರ್​ ಹಿಡಿದು ದಮಕಿ ಹಾಕಿದ್ದಾರೆ. ಸಿಸಿಟಿವಿಯಲ್ಲಿ ಪುಂಡರ ಅಟ್ಟಹಾಸದ ದೃಶ್ಯ ಸೆರೆಯಾಗಿದೆ. ಹೆಬ್ಬಗೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net