ಬೋರಗಾಂವ: ಸಿದ್ಧೇಶ್ವರ ಜಾತ್ರೆ ಭಕ್ತಿ ಮತ್ತು ಪರಂಪರೆಯ ಸಂಗಮವಾಗಿದೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು. ಪಟ್ಟಣದಲ್ಲಿ ಸಿದ್ಧೇಶ್ವರ ದೇವರ ವಿಶಾಳಿ ಯಾತ್ರೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಉದ್ಯಮಿ ಅಭಿನಂದನ ಪಾಟೀಲ ಮತ್ತು ಸಹಕಾರ ರತ್ನ ಉತ್ತಮ ಪಾಟೀಲ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ಮಹಾಪ್ರಸಾದ ಜರುಗಿತು. ಯಾತ್ರೆಯಲ್ಲಿ ಅನೇಕ ಭಕ್ತರು ಪಾಲ್ಗೊಂಡಿದ್ದರು.