ಸುಗಮ ಸಂಗೀತದ ಆಯಾಮ ಬದಲಿಸಿದ ಪಿ.ಕಾಳಿಂಗರಾವ್

ಕಿಕ್ಕೇರಿಯಲ್ಲಿ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿಯಿಂದ ಸೋಮವಾರ ದಿ.ಪಿ.ಕಾಳಿಂಗರಾವ್ ಅವರ ಜನ್ಮದಿನ ಆಚರಿಸಲಾಯಿತು. ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ತ್ರಿವೇಣಿ, ಕವಿತಾ, ಜೀವಿತಾ ಇತರರಿದ್ದರು.
ಕಿಕ್ಕೇರಿಯಲ್ಲಿ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿಯಿಂದ ಸೋಮವಾರ ದಿ.ಪಿ.ಕಾಳಿಂಗರಾವ್ ಅವರ ಜನ್ಮದಿನ ಆಚರಿಸಲಾಯಿತು. ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ, ತ್ರಿವೇಣಿ, ಕವಿತಾ, ಜೀವಿತಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಿ.ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ
  • ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತಾ ಅಕಾಡೆಮಿ ಟ್ರಸ್ಟ್‌
ಕಿಕ್ಕೇರಿ; ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ ಗಾಯಕ, ಸಂಗೀತ ನಿರ್ದೇಶಕ ಪಿ.ಕಾಳಿಂಗರಾವ್ ಅವರು ಸದಾ ಕಾಲ ಪ್ರಾತಃಸ್ಮರಣೀಯ ಎಂದು ದಿ.ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಬಣ್ಣಸಿದರು.
ಇಲ್ಲಿನ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತಾ ಅಕಾಡೆಮಿ ಟ್ರಸ್ಟ್‌ನಿಂದ ಆಯೋಜಿಸಿದ್ದ ಪಿ.ಕಾಳಿಂಗ ರಾವ್ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ಸುಗಮ ಸಂಗೀತದ ಪ್ರಾರಂಭದ ದಿನಗಳಲ್ಲಿ ಕನ್ನಡ ಗೀತೆಗಳನ್ನು ಬೀದಿಬೀದಿಗಳಲ್ಲಿ ಹಾಡುತ್ತಾ ಕನ್ನಡ ಗೀತೆಗಳಿಂದಲೇ ಕಾರ್ಯಕ್ರಮ ರೂಪಿಸಿದ ಮಹಾನ್ ಶಿಲ್ಪಿ ಕಾಳಿಂಗರಾವ್ ಅವರು. ಅವರು ಹಾಡಿದ ಕೆ.ಎಸ್.ನರಸಿಂಹಸ್ವಾಮಿ ರಚಿತ ‘ಅಂತಿಂಥ ಹೆಣ್ಣು ನೀನಲ್ಲ ನಿನ್ನಂಥ ಹೆಣ್ಣು ಇನ್ನಿಲ್ಲ’... ಎನ್ನುವ ಗೀತೆ ಕಿಕ್ಕೇರಿ ಹೆಸರನ್ನು ಇಡೀ ರಾಜ್ಯಕ್ಕೆ ಚಿರಪರಿಚಿತಗೊಳಿಸಿತು ಎಂದರು.
ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ... ಬ್ರಹ್ಮ ನಿಂಗೆ ಜೋಡುಸ್ತೀನಿ ಹೆಂಡ ಮುಟ್ಟಿದ ಕೈ ನಾ... ಎಲ್ಲದರು ಇರು ಎಂತಾದರು ಇರು... ಇಂತಹ ನೂರಾರು ಗೀತೆಗಳನ್ನು ತಮ್ಮ ಕಂಠಸಿರಿಯಲ್ಲಿ ಕನ್ನಡ ನಾಡಿಗೆ ಉಣಬಡಿಸಿದವರು ಪಿ. ಕಾಳಿಂಗರಾವ್ ಎಂದು ಸ್ಮರಿಸಿದರು.
ಅಂದು ಹಾಡಿದ ದಾಸರ ಪದಗಳು, ಜಾನಪದ ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಳಿಯದೆ ಹಚ್ಚ ಹಸಿರಾಗಿವೆ. ಇಂತಹ ಮಹಾನ್ ಕಲಾವಿದರ ಜನ್ಮದಿನವನ್ನು ಶಾಲಾ ಕಾಲೇಜಿನ ಮಕ್ಕಳಿಗೆ ಇವರು ಹಾಡಿದ ಗೀತೆಗಳನ್ನು ಹೇಳಿಕೊಟ್ಟು, ಹಾಡಿಸಿ ಮುಂದಿನ ತಲೆಮಾರಿಗೆ ಕಾಳಿಂಗರಾವ್ ಉಳಿಯುವಂತೆ ಮಾಡಬೇಕಿದೆ. ನಮ್ಮ ನೆಲದ ಸಂಸ್ಕೃತಿ, ಪರಂಪರೆ ತಲುಪಿಸುವ ಕೆಲಸ ಆಗಬೇಕಿದೆ. ಸರ್ಕಾರ ಕೂಡ ಕಾಳಿಂಗರಾವ್ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಪಿ.ಕಾಳಿಂಗರಾವ್ ಹಾಡಿದ ಹತ್ತು ಹಲವು ಗೀತೆಗಳನ್ನು ಹಾಡಿ, ಮಕ್ಕಳಿಂದಲೂ ಹಾಡಿಸಿ ಮಕ್ಕಳಿಲ್ಲಿನ ಕನ್ನಡ ಪ್ರೇಮ ಹಿಮ್ಮಡಿಗೊಳಿಸಿದರು. ಇದಕ್ಕೂ ಮುನ್ನ ಪಿ.ಕಾಳಿಂಗ ರಾವ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ತ್ರಿವೇಣಿ, ಕವಿತಾ, ಜೀವಿತಾ, ಸೌಮ್ಯಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net