ಎರಡು ದಿನಗಳ ವಿಜಯವಾಣಿ ಪ್ರಾಪರ್ಟಿ ಎಕ್ಸ್​ಪೋಗೆ ಭರ್ಜರಿ ಸ್ಪಂದನೆ; ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಚಾಲನೆ!

ಎರಡು ದಿನಗಳ ವಿಜಯವಾಣಿ ಪ್ರಾಪರ್ಟಿ ಎಕ್ಸ್​ಪೋಗೆ ಭರ್ಜರಿ ಸ್ಪಂದನೆ; ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಚಾಲನೆ!
Published on: 

ಬೆಂಗಳೂರು: ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಜಯನಗರದ 2ನೇ ಬ್ಲಾಕ್​ನ ಅಶೋಕ ಪಿಲ್ಲರ್ ಬಳಿಯ ಚಂದ್ರಸಾಗರ ಕಲ್ಯಾಣ ಮಹಲ್​ನಲ್ಲಿ ಆಯೋಜಿಸಿರುವ ಎರಡು ದಿನಗಳ ‘ಪ್ರಾಪರ್ಟಿ ಎಕ್ಸ್​ಪೋ’ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಅಧ್ಯಕ್ಷ ಎನ್.ಎ.ಹ್ಯಾರಿಸ್, ಎಕ್ಸ್ ಪೋಗೆ ಶನಿವಾರ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಗ್ರಾಹಕರು ಕುಟುಂಬ ಸಮೇತ ಆಗಮಿಸಿ ಪ್ರತಿ ಸ್ಟಾಲ್​ಗಳಲ್ಲಿ ಸೂರು ಹೊಂದಲು ಬೇಕಾದ ನಿವೇಶನಗಳು, ಅಪಾರ್ಟ್​ವೆುಂಟ್, ಫಾಮರ್್​ಲ್ಯಾಂಡ್ ಮತ್ತು ವಿಲ್ಲಾ ಸೇರಿ ಇತರ ಸ್ಥಿರಸ್ತಿಗಳ ಬಗ್ಗೆ ವಿವರ ಕಲೆಹಾಕಿದರು. ಕಂಪನಿಯ ನಿವೇಶನಗಳು ಮತ್ತು ಸೌಲಭ್ಯಗಳು ಇಷ್ಟವಾಗುತ್ತಲೇ ಪರಿಶೀಲನೆ ನಡೆಸಲು ಸ್ಥಳದಲ್ಲೇ ನಿವೇಶನಗಳ ಬುಕ್ಕಿಂಗ್ ಕೂಡ ಮಾಡಿದರು.

ಸ್ಟಾಲ್​ಗಳಲ್ಲಿ ನೂಕುನುಗ್ಗಲು

ಸ್ಟಾಲ್​ಗಳ ಮೂರು ಗೋಡೆಗಳಲ್ಲಿ ಕಂಪನಿಯ ಯೋಜನೆಗಳ ಆಕರ್ಷಕ ಚಿತ್ರಗಳು ಗ್ರಾಹಕರ ಮನಸೊರೆ ಗೊಂಡವು. ಪ್ರತಿ ಸ್ಟಾಲ್​ಗಳಿಗೂ ನೂರಾರು ಮಂದಿ ಭೇಟಿ ನೀಡಿ ಮಾಹಿತಿ ಪಡೆದರು.ಪೀಠೋಪಕರಣ ಉದ್ಯಮ, ಕಬ್ಬಿಣ ಹಾಗೂ ಸಿಮೆಂಟ್ ಕಂಪನಿಗಳು, ಮನೆಯ ಹೊರಾಂಗಣ, ಒಳಾಂಗಣ ವಿನ್ಯಾಸ ತಜ್ಞರು, ಕಟ್ಟಡ ಸಾಮಗ್ರಿ ಮಳಿಗೆಗಳಿಗೂ ಜನರು ಭೇಟಿ ನೀಡಿದ್ದರು.

ಅದೃಷ್ಟಶಾಲಿಗಳಿಗೆ ಚಿನ್ನದ ನಾಣ್ಯ

ದೇವನಹಳ್ಳಿ ವಿಮಾನ ನಿಲ್ದಾಣ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ಮತ್ತು ತಮಕೂರು ರಸ್ತೆ ಸೇರಿ ನಗರದ ವಿವಿಧ ಕಡೆಗಳಲ್ಲಿನ ನಿವೇಶನ, ಅಪಾರ್ಟ್​ವೆುಂಟ್, ಫಾಮರ್್​ಲ್ಯಾಂಡ್,ವಿಲ್ಲಾಗಳನ್ನು ವೀಕ್ಷಣೆಗೆ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ವೀಕ್ಷಣೆ ನಂತರ ಇಷ್ಟವಾದರೆ ದಾಖಲೆಗಳನ್ನು ಪರಿಶೀಲಿಸಿ ಖರೀದಿಸುವ ಇಚ್ಛೆ ಹೊಂದಿದ್ದಾರೆ.ಪ್ರಾಪರ್ಟಿ ಎಕ್ಸ್​ಪೋದಲ್ಲಿ ಲಕ್ಕಿ ಡ್ರಾ ಬಳಿಕ ಸ್ಥಳದಲ್ಲೇ ಅದೃಷ್ಟಶಾಲಿಗಳಿಗೆ ಬೆನಕಾ ಗೋಲ್ಡ್​ನಿಂದ ಗೋಲ್ಡನ್ ಕಾಯಿನ್ ವಿತರಿಸಲಾಯಿತು. ಎಕ್ಸ್​ಪೋಗೆ ಭೇಟಿ ನೀಡುವವರು ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶ ಇದೆ. ವಿವಿಧ ಕಂಪನಿಗಳ ನಿವೇಶನ, ಮನೆ, ವಿಲ್ಲಾಗಳು ಇಷ್ಟವಾಗುತ್ತಲೇ ಅವುಗಳಿಗೆ ಬ್ಯಾಂಕುಗಳಿಂದ ಸಾಲ ದೊರೆಯುತ್ತದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಗ್ರಾಹಕರು ಯೂನಿಯನ್ ಬ್ಯಾಂಕ್ ಸ್ಟಾಲ್ ಮುಂದೆ ಜಮಾಯಿಸಿದ್ದರು. ಗ್ರಾಹಕರಿಗೆ ಸಿಗುವ ಸಾಲ, ಅದಕ್ಕೆ ಬೇಕಾದ ದಾಖಲೆ ಮತ್ತು ಸಿಗುವ ಸಾಲಕ್ಕೆ ಪ್ರತಿ ತಿಂಗಳು ಪಾವತಿಸಬೇಕಾದ ಇಎಂಐಗಳ ಬಗ್ಗೆ ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಪಡೆದರು.

25ಕ್ಕೂ ಅಧಿಕ ಕಂಪನಿಗಳು ಭಾಗಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಶರಣ್ಯ ಫಾಮ್್ಸರ್ ಸಪ್ತಗಿರಿ ಪ್ರಮೋಟರ್ರ್ ಆಂಡ್ ಡೆವಲಪರ್ಸ್, ಡಿಎಸ್ ಮ್ಯಾಕ್ಸ್, ಕೆಎನ್​ಎಸ್ ಇನ್ಪ್ರಾ, ಫೈನೆಸ್ಟ್ ಪ್ರಾಪರ್ಟೀಸ್, ಆರ್ಥಸಿದ್ಧಿ ವೆಂಚರ್ಸ್, ಟಬೋಸ್ಟೀಲ್, ಸಪ್ತಾಶ್ವ ಡೆವಲಪರ್ಸ್, ವಿ2 ಹೋಲ್ಡಿಂಗ್ಸ್, ಇನ್​ಫ್ರೈಡ್, ಸ್ಪೂರ್ತಿ ಡೆವಲಪರ್ಸ್, ಕೃಷಿ ವಿಶ್ವ ಗೃಹ ನಿರ್ಮಾಣ ಸಂಘ, ಎಸ್​ಆರ್​ಆರ್ ಡೆವೆಲಪರ್ಸ್, ಚೌಡೇಶ್ವರಿ ರಿಯಲ್ ಎಸ್ಟೇಟ್, ಅಕಾರಸ್ ರಿಯಾಲ್ಟಿ, ಡಿಎಲ್​ಎಸ್ ಇನ್ಪ್ರಾ, ವೇ ಟು ವರ್ಡ್ ಹಾಗೂ ಬೆನಕ ಗೋಲ್ಡ್.

ಎಕ್ಸ್​ಪೋಗೆ ಇಂದು ತೆರೆ

ವಿಜಯವಾಣಿ ‘ಪ್ರಾಪರ್ಟಿ ಎಕ್ಸ್​ಪೋ’ಗೆ ಭಾನುವಾರ ತೆರೆಬೀಳಲಿದೆ. ಗ್ರಾಹಕರು ಕುಟುಂಬದ ಸದಸ್ಯರೊಂದಿಗೆ ಮೇಳಕ್ಕೆ ಭೇಟಿ ನೀಡಬಹುದು. ಸಂಪೂರ್ಣ ಹವಾ ನಿಯಂತ್ರಿತ ಸೌಲಭ್ಯ ಇದೆ. ಉಚಿತ ಪ್ರವೇಶ, ವಾಹನ ನಿಲುಗಡೆ ವ್ಯವಸ್ಥೆ ಇದೆ. ವಾರಾಂತ್ಯದ ರಜೆ ಇರುವುದರಿಂದ ಮೇಳಕ್ಕೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.