ಬೆಂಗಳೂರು ಮೂಲದ 18 ವರ್ಷದ, ಸೆಂಟ್ ಜೋಸೆಫ್ಸ್‌ನ 12ನೇ ತರಗತಿ ವಿದ್ಯಾರ್ಥಿಯಾದ ಗೋಸ್ವಾಮಿ, ಭಾರತದ ಅತಿ ದೀರ್ಘಕಾಲದ ಸಿಂಗಲ್-ಸೀಟರ್ ಚಾಂಪಿಯನ್‌ಶಿಪ್‌ನಲ್ಲಿ ವಾರಾಂತ್ಯದ ನಾಲ್ಕು ರೇಸ್‌ಗಳಲ್ಲಿ ಮೂರನ್ನು ಗೆದ್ದು ಅದ್ಭುತ ಅಂತಿಮ ಪ್ರದರ್ಶನ ನೀಡಿದರು. ವಿಶೇಷವಾಗಿ ಭಾನುವಾರದ 20-ಲ್ಯಾಪ್ ಅಂತಿಮ ರೇಸ್‌ನಲ್ಲಿ ಅವರು ರಿವರ್ಸ್ ಗ್ರಿಡ್‌ನ ಏಳನೇ ಸ್ಥಾನದಿಂದ ಪ್ರಾರಂಭಿಸಿ, 4 ಪಾಯಿಂಟ್ ಹಿಂದುಳಿದಿದ್ದ ದಿಲ್ಜಿತ್‌ಗಿಂತ ಮೂರು ಸ್ಥಾನ ಹಿಂದೆ ಇದ್ದರು. ಈ ಬಗ್ಗೆ ಮಾತನಾಡಿದ ಅವರು "ಇದು ದೀರ್ಘ ಓಟವಾಗಿದ್ದು, ನಾನು ತಾಳ್ಮೆಯಿಂದಿರಬೇಕು ಎಂದು ನನಗೆ ತಿಳಿದಿತ್ತು' ಎಂದರು.