

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ರಾಷ್ಟ್ರೀಯಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದಸರಸಂಘಚಾಲಕ ಮೋಹನ್ ಭಾಗವತ್ ಅವರಪ್ರಸ್ತಾವಿತ ಕೆನಡಾ ಭೇಟಿಗೆ100ಕ್ಕೂಹೆಚ್ಚು ಕೆನಡಾ ಮೂಲದ ಸಂಘಟನೆಗಳುಹಾಗೂ ನಾಗರಿಕ ಹಕ್ಕುಗಳ ಗುಂಪುಗಳುಬೆಂಬಲ ವ್ಯಕ್ತಪಡಿಸಿವೆ.
ಭಾಗವತ್ಅವರನ್ನು ಕೆನಡಾ ಪ್ರವೇಶಿಸದಂತೆತಡೆಯಬೇಕು ಎಂದು ಕೆಲ ಸಂಸದರುಹಾಗೂ ಸಂಘಟನೆಗಳು ಮಾಡಿರುವಒತ್ತಾಯವನ್ನು ತಿರಸ್ಕರಿಸುವಂತೆಕೆನಡಾ ಪ್ರಧಾನಿ ಮಾರ್ಕ್ ಕಾರ್ನಿನೇತೃತ್ವದ ಸರ್ಕಾರಕ್ಕೆ ಮನವಿಮಾಡಿರುವ ಸಂಘಟನೆಗಳು,ಭಾಗವತ್ಅವರ ಪ್ರವೇಶಕ್ಕೆ ಸಂಬಂಧಿಸಿದಯಾವುದೇ ನಿರ್ಧಾರವನ್ನು ರಾಜಕೀಯಒತ್ತಡದ ಬದಲಾಗಿ ಸಾಕ್ಷ್ಯ,ಕಾನೂನುಪ್ರಕ್ರಿಯೆ ಮತ್ತು ಸಮಾನತೆಯಆಧಾರದ ಮೇಲೆ ಕೈಗೊಳ್ಳಬೇಕು ಎಂದುಆಗ್ರಹಿಸಿವೆ.
ಕೆನಡಾದಲ್ಲಿ10 ಲಕ್ಷಕ್ಕೂಹೆಚ್ಚು ಹಿಂದೂಗಳಿದ್ದು,ಈ ಭೇಟಿಮಹತ್ವದ್ದಾಗಿದೆ ಎಂದು ಪತ್ರದಲ್ಲಿಉಲ್ಲೇಖಿಸಲಾಗಿದೆ.ಆರ್‌ಎಸ್‌ಎಸ್ಸಮುದಾಯ ಸೇವೆ,ಸಾಮಾಜಿಕಚಟುವಟಿಕೆಗಳು,ಸಾಂಸ್ಕೃತಿಕಕಾರ್ಯಗಳು ಮತ್ತು ಸಾರ್ವಜನಿಕವಿಚಾರಗಳ ಚರ್ಚೆಯಲ್ಲಿ ತೊಡಗಿರುವಪ್ರಮುಖ ಭಾರತೀಯ ಸಂಘಟನೆ ಎಂದುಪತ್ರದಲ್ಲಿ ಬಣ್ಣಿಸಲಾಗಿದೆ.
ಈ ನಡುವೆನ್ಯೂ ಡೆಮಾಕ್ರಟಿಕ್ ಪಾರ್ಟಿಯಸಂಸದರಾದ ಜೆನ್ನಿ ಕ್ವಾನ್ ಮತ್ತುಹೀದರ್ ಮೆಕ್‌ಫರ್ಸನ್ ಸೇರಿ ಕೆಲವರುಭಾಗವತ್ ಅವರನ್ನು ಕೆನಡಾ ಪ್ರವೇಶಿಸದಂತೆತಡೆಯಬೇಕೆಂದು ಸರ್ಕಾರವನ್ನುಒತ್ತಾಯಿಸಿದ್ದರು.ಭಾಗವತ್ಅವರ ಕೆನಡಾ ಭೇಟಿಯನ್ನು ತಡೆಯುವಂತೆಕೇಳಿಬಂದಿರುವ ಆರೋಪಗಳಿಗೆ ಸೂಕ್ತಸಾಕ್ಷ್ಯವಿದೆಯೇ ಎಂಬುದನ್ನುಪರಿಶೀಲಿಸಬೇಕು.ಕಾನೂನುಮತ್ತು ನ್ಯಾಯಸಮ್ಮತ ಪ್ರಕ್ರಿಯೆಅನುಸರಿಸಿಯೇ ಪ್ರವೇಶದ ಕುರಿತುನಿರ್ಧಾರ ಕೈಗೊಳ್ಳುವಂತೆ ಸಂಘಟನೆಗಳುಒತ್ತಾಯಿಸಿವೆ.